ಅಮೃತಸರ್: ಪಂಜಾಬ್ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಈ ಸಂದರ್ಭದಲ್ಲೇ ಬಿಜೆಪಿ ದೊಡ್ಡ ಆಘಾತವಾಗಿದೆ. ಖ್ಯಾತ ಕ್ರಿಕೆಟರ್ ಮತ್ತು ಮಾಜಿ ಬಿಜೆಪಿ ಸಂಸದ ನವಜೋತ್ ಸಿಂಗ್ ಸಿಧು ಅವರ ಪತ್ನಿ ಪಕ್ಷ ತೊರೆದಿದ್ದಾರೆ.
ಎಪ್ರಿಲ್ 1ರಂದೇ ನವಜೋತ್ ಕೌರ್ ತಮ್ಮ ರಾಜೀನಾಮೆಯನ್ನು ಫೇಸ್ಬುಕ್ ಮುಖಾಂತರ ತಿಳಿಸಿದ್ದರು. ಆದರೆ ಇದು ಎಪ್ರಿಲ್ ಫೂಲ್ ಜೋಕ್ ಎಂದೇ ನಂಬಲಾಗಿದ್ದು, ಇದೀಗ ಅವರು ಮತ್ತೊಮ್ಮೆ ಪಕ್ಷ ತೊರೆದಿರುವುದನ್ನು ಖಚಿತಪಡಿಸಿದ್ದಾರೆ.
2014ರಲ್ಲಿ ಸಿಧು ಅವರಿಗೆ ಬಿಜೆಪಿ ಸಂಸತ್ತು ಚುನಾವಣಾ ಟಿಕೆಟ್ನ್ನು ನಿರಾಕರಿಸಿತ್ತು, ಆ ಬಳಿಕ ದಂಪತಿಗಳು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಹಲವಾರು ಬಾರಿ ಬಹಿರಂಗವಾಗಿಯೇ ಪಕ್ಷವನ್ನು ಟೀಕಿಸಿದ್ದರು. ಇದೀಗ ಕೌರ್ ರಾಜೀನಾಮೆ ನೀಡಿದ್ದಾರೆ. ಸಿಧು ಕೂಡ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ದಂಪತಿಗಳು ಆಮ್ ಆದ್ಮಿ ಪಕ್ಷವನ್ನು ಸೇರುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.