ಬಂಟ್ವಾಳ : ನಿಯಮ ಮೀರಿ ನಿಗದಿತ ತೂಕಕ್ಕಿಂತ ಅಧಿಕ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬಿ.ಸಿ.ರೋಡಿನಲ್ಲಿ ವಶಕ್ಕೆ ಪಡೆದುಕೊಂಡು ದಂಡ ವಿಧಿಸಿದ್ದಾರೆ.
ಇಲ್ಲಿನ ಬಸ್ಸು ನಿಲ್ದಾಣದ ಬಳಿ ಗಣಿ ಇಲಾಖೆಯ ಅಧಿಕಾರಿಗಳಾದ ರಾಮಪ್ಪ ಮತ್ತು ನಾಗೇಂದ್ರಪ್ಪ ನೇತೃತವದ ಅಧಿಕಾರಿಗಳ ತಂಡ ಈ ಕಾರ್ಯಚರಣೆ ನಡೆಸಿ ಸುಮಾರು ೬ ಲಾರಿಗಳನ್ನು ತಪಾಸಣೆಗಾಗಿ ನಿಲ್ಲಿಸಿದಾಗ ಪರವನಗಿಯಲ್ಲಿ ಉಲ್ಲೇಖಿಸಿದ ನಿಗದಿತ ತೂಕಕ್ಕಿಂತ ಅಧಿಕ ಮರಳು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಲಾರಿಯೊಂದರಲ್ಲಿ ೧೦ ರಿಂದ ೧೬ ಟನ್ವರಗೆ ಮರಳು ಸಾಗಾಟಕ್ಕೆ ಪರವನಗಿ ಇದೆ. ಆದರೆ ಕೆಲ ಲಾರಿಗಳಲ್ಲಿ ನಿಯಮ ಉಲ್ಲಂಘಿಸಿ ೨೩ ಟನ್ವರೆಗೂ ಮರಳು ಸಾಗಾಟ ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದ್ದು ನಿಗದಿತ ತೂಕಕ್ಕಿಂತ ಪ್ರತೀ ಒಂದು ಟನ್ ಅಧಿಕ ಮರಳು ಸಾಗಟಕ್ಕೆ ಎರಡು ಸಾವಿರ ರುಪಾಯಿಯಂತೆ ದಂಡ ವಿಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಕಾರ್ಯಚರಣೆಗೆ ಬಂಟ್ವಾಳ ನಗರ ಪೊಲೀಸರು ಸಹಕಾರ ನೀಡಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.