ಚೆನ್ನೈ: ಅತ್ಯಧಿಕ ಹಾಡುಗಳ ರೆಕಾರ್ಡಿಂಗ್ ಮಾಡಿರುವ ದಕ್ಷಿಣ ಭಾರತದ ಹೆಸರಾಂತ ಹಿನ್ನೆಲೆ ಗಾಯಕಿ ಪಿ. ಸುಶೀಲಾ ಅವರ ಹೆಸರು ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಗೆ ಸೇರಿದೆ. ಇಷ್ಟು ವರ್ಷಗಳ ಕಾಲ ಗಾನ ಲೋಕದಲ್ಲಿ ಅವರು ಸಲ್ಲಿಸಿದ ಸೇವೆಗೆ ಸಂದ ಗೌರವ ಇದಾಗಿದೆ.
1935 ರಲ್ಲಿ ಜನಿಸಿದ ಪಿ. ಸುಶಿಲಾ ಮೋಹನ್ ಅವರು 1960 ರಿಂದ ಇಲ್ಲಿಯವರೆಗೆ ಆರು ಭಾಷೆಗಳಲ್ಲಿ ಸುಮಾರು 17,695 ಸೋಲೋ, ಡ್ಯುಯೆಟ್ ಹಾಗೂ ಕೋರಸ್ ಹಾಡುಗಳನ್ನು ಹಾಡಿರುವ ಬಗ್ಗೆ ವರದಿಯಾಗಿದೆ ಎಂದು ಗಿನ್ನೆಸ್ ವಿಶ್ವ ದಾಖಲೆ ಉಲ್ಲೇಖಿಸಿದೆ.
ಅವರು ತಮಿಳು, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಮತ್ತಿತರ ಭಾಷೆಗಳಲ್ಲಿ ಹಾಡಿದ್ದಾರೆ.
ಸಾವಿರಾರು ಹಾಡುಗಳನ್ನು ಹಾಡಿರುವುದೇ ನನಗೆ ದೊರಕಿದ ದೊಡ್ಡ ಗೌರವ ಎಂದು ಸುಶೀಲಾ ಅವರು ಹೇಳಿದ್ದಾರೆ.
ಅವರು 1952 ರಲ್ಲಿ ’ಪೆಟ್ರ ಥಾಯ್’ ತಮಿಳು ಸಿನಿಮಾದ ’ಇಥರಕ್ಕು ಅಳೈತಾಯ್’ ಮೂಲಕ ತಮ್ಮ ವೃತ್ತಿ ಆರಂಭಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.