ನವದೆಹಲಿ: ಭಾರತದ ಸ್ಪೈಯೊಬ್ಬನನ್ನು ಬಂಧಿಸಿದ್ದೇವೆ ಎಂದು ಹೇಳಿರುವ ಪಾಕಿಸ್ಥಾನ, ಆದ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ. ಆದರೆ ಭಾರತ ಪಾಕಿಸ್ಥಾನದ ಈ ಥಿಯರಿಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ.
ಈ ವಿಡಿಯೋದಲ್ಲಿ ವೈಯಕ್ತಿಕವಾಗಿ ಹೇಳಿಕೆ ನೀಡಲಾಗಿದೆ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಪ್ರಮುಖವಾಗಿ ನಾವು ನಿರಂತರವಾಗಿ ಬೇಡಿಕೆಯಿಡುತ್ತಿದ್ದರೂ ಭಾರತೀಯ ಪ್ರಜೆಯನ್ನು ವಿದೇಶಿ ನೆಲದಲ್ಲಿ ಬಂಧಿಸಿದ್ದಕ್ಕೆ ಕಾನ್ಸುಲರ್ ಎಸೆಸ್ನ್ನೂ ನೀಡಲಾಗಿಲ್ಲ. ಆತನ ಹಿತದ ಬಗ್ಗೆ ನಮಗೆ ಚಿಂತೆಯಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತೀಯ ನೌಕಾದಳದ ಮಾಜಿ ಅಧಿಕಾರಿ ಕುಲ ಭೂಷಣ್ ಯಾದವ್ ಅವರನ್ನು ಪಾಕಿಸ್ಥಾನ ಬಂಧಿಸಿದ್ದು, ಅವರು ಭಾರತದ ಸ್ಪೈ ಎಂದು ಆರೋಪಿಸಿದೆ. ಬಲೂಚಿಸ್ತಾನ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಿದ ಆರೋಪವನ್ನು ಇವರ ಮೇಲೆ ಪಾಕಿಸ್ಥಾನ ಹೊರಿಸಿದೆ. ಅವರು ತಪ್ಪೊಪ್ಪಿಕೊಂಡಿರುವ ಬಗ್ಗೆ ವೀಡಿಯೋವನ್ನೂ ಬಿಡುಗಡೆಗೊಳಿಸಿದೆ.
ಇದೀಗ ಅವರಿಗೆ ಕಾನ್ಸುಲರ್ ಎಸೆಸ್ ನೀಡುವಂತೆ ಭಾರತ ಪಾಕಿಸ್ಥಾನಕ್ಕೆ ಮನವಿ ಮಾಡಿಕೊಳ್ಳುತ್ತಿದೆ. ಇವರನ್ನು ಇರಾನ್ನಿಂದ ಅಪಹರಿಸಿ ಪಾಕಿಸ್ಥಾನ ಸುಳ್ಳು ಹೇಳುತ್ತಿದೆ ಎಂಬ ಶಂಕೆಯನ್ನೂ ಭಾರತ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.