ನವದೆಹಲಿ: ಬಾಕಿ ಪಾವತಿ ಮಾಡದಿರುವ ಎಲ್ಲಾ ಕಾರ್ಪೋರೇಟ್ಗಳಿಂದ ಎಲ್ಲಾ ಬಾಕಿಯನ್ನು ವಾಪಾಸ್ ಪಡೆದುಕೊಳ್ಳಲು ಸರ್ಕಾರ ಮತ್ತು ಆರ್ಬಿಐ ಕಠಿಣ ಕ್ರಮವನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಅತಿ ಶೀಘ್ರದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದನ್ನು ಅನುಮಾನಿಸುವವರಿಗೆ ತಿರುಗೇಟು ನೀಡಿರುವ ಅವರು, ಆರ್ಥಿಕತೆಯ ಯಶಸ್ವಿನ ಬಗ್ಗೆ ಇರುವ ಕ್ರೆಡಿಟ್ ಗ್ರೋಥ್ ಮತ್ತು ಎಫ್ಡಿಐ ಇನ್ಫ್ಲೋ ರೆಕಾರ್ಡ್ಗಳನ್ನು ಪ್ರಸ್ತಾಪ ಮಾಡಿದರು.
ಉದ್ಯೋಗ ಸೃಷ್ಟಿಯೊಂದಿಗೆ ಸ್ಥಿರ ಪ್ರಗತಿಗಾಗಿ ಆಡಳಿತಾತ್ಮಕ ಮತ್ತು ಪಾಲಿಸಿ ಸುಧಾರಣೆಯತ್ತ ಸರ್ಕಾರದ ಯೋಜನೆಗಳು ಗಮನವಹಿಸುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಸೋರಿಕೆಯನ್ನು ತಡೆದು, ಅರ್ಹ ವ್ಯಕ್ತಿಗಳಿಗೆಯೇ ಹಣ ತಲುಪುವಂತೆ ಮಾಡುತ್ತಿದ್ದೇವೆ ಎಂದರು.
ದೇಶದ ಬಹುತೇಕ ಜನ ಕೃಷಿಯನ್ನು ಅವಲಂಬಿಸಿದ್ದು, ರೈತರ ಆದಾಯವನ್ನು ದ್ವಿಗುಣಗೊಳಿಸುವುದರಿಂದ ಇತರ ವಲಯಕ್ಕೂ ಸಾಕಷ್ಟು ಪ್ರಯೋಜನವಾಗಲಿದೆ ಎಂದರು.
ಭಾರತ ಜಾಗತಿಕ ಆರ್ಥಿಕತೆಯ ಪ್ರಖರ ತಾಣವಾಗಿದ್ದು, ಕಡಿಮೆ ಹಣದುಬ್ಬರ, ಕಡಿಮೆ ಚಾಲ್ತಿ ಲೆಕ್ಕ ಕೊರತೆಯನ್ನು ಹೊಂದಿದ್ದೇವೆ. ಜಾಗತಿಕ ಕೊಡುಗೆಗೆ ಸಂಬಂಧಿಸಿದಂತೆ ಜಗತ್ತು ಭಾರತದಿಂದ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.