ನವದೆಹಲಿ: ಬೆಲ್ಜಿಯಂನ ಬ್ರುಸೆಲ್ಸ್ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರನ್ ಗಣೇಶ್ ಅವರು ದಾಳಿಯಲ್ಲಿ ಅಸುನೀಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ದಾಳಿ ನಡೆದ ವಾರಗಳ ಬಳಿಕ ವಿದೇಶಾಂಗ ಸಚಿವಾಲಯ 28 ವರ್ಷದ ರಾಘವೇಂದ್ರ ಅವರು ದಾಳಿಯಲ್ಲಿ ಹತ್ಯೆಯಾಗಿರುವುದನ್ನು ದೃಢಪಡಿಸಿದೆ.
ಬೆಲ್ಜಿಯನ್ ರಾಜಧಾನಿಯ ಮೀಲ್ಬೀಕ್ ಸ್ಟೇಶನ್ನಲ್ಲಿ ಅವರಿದ್ದ ವೇಳೆ ಸ್ಫೋಟ ಸಂಭವಿಸಿತ್ತು, ಇದಾದ ಬಳಿಕ ಅವರ ಸುಳಿವೇ ಇರಲಿಲ್ಲ. ಇದೀಗ ಆ ಸ್ಫೋಟದಲ್ಲಿ ಅವರು ಮೃತರಾಗಿದ್ದಾರೆ ಎಂಬುದು ದೃಢವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ‘ಬ್ರುಸೆಲ್ಸ್ ಅಧಿಕಾರಿಗಳು ರಾಘವೇಂದ್ರನ್ ಅವರು ಬ್ರುಸೆಲ್ಸ್ ದಾಳಿಯಲ್ಲಿ ಹತ್ಯೆಯಾದವರಲ್ಲಿ ಒಬ್ಬರು ಎಂಬುದನ್ನು ಖಚಿತಪಡಿಸಿದ್ದು, ಈ ವಿಷಯವನ್ನು ಅತ್ಯಂತ ದುಃಖದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.
ಅವರ ಮೃತದೇಹವನ್ನು ಬ್ರುಸೆಲ್ಸ್ನಲ್ಲಿರುವ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.