ಮೀರತ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪೋಸ್ಟರ್ಗಳಿಗೆ ಕಪ್ಪು ಶಾಯಿ ಬಳಿದು, ಮೊಟ್ಟೆಗಳನ್ನು ಎಸೆದು ಪ್ರತಿಭಟಿಸುತ್ತಿದ್ದ ಸುಮಾರು 150 ಉದ್ಯಮಿಗಳು ಮತ್ತು ಚಿನ್ನಾಭರಣ ವ್ಯಾಪಾರಿಗಳನ್ನು ಬಂಧಿಸಲಾಗಿದೆ.
ಭಾರತದ ದಂಡ ಸಂಹಿತೆಯ ಸೆಕ್ಷನ್ 147(ದಂಗೆ), 341 (ಅಕ್ರಮ ಸಂಯಮ) ಹಾಗೂ 505(ಸಾರ್ವಜನಿಕ ಕಿಡಿಗೇಡಿತನ) ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಉದ್ಯಮಿಗಳ ಸಂಘಟನೆಯ ನಾಯಕ ರಾಜ್ಕುಮಾರ್ ಭಾರಧ್ವಾಜ್, ಮೀರತ್ ಚಿನ್ನಾಭರಣ ವ್ಯಾಪಾರಿಗಳ ಸಂಘಟನೆಯ ಸರ್ವೇಶ್ ಕುಮಾರ್ ಸರಫ್ ಸೇರಿದಂತೆ 150 ಮಂದಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 23ರಂದು ಹೋಳಿ ಹಬ್ಬದ ನಿಮ್ಮಿತ್ತ ಪ್ರದರ್ಶನ ಏರ್ಪಡಿಸಿದ್ದ ಸಂದರ್ಭ ನಗರದ ಉದ್ಯಮಿಗಳು ಮತ್ತು ಚಿನ್ನ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಚಿನ್ನ ವ್ಯಾಪಾರಿಗಳ ಸಂಘಟನೆ ಈ ಕೃತ್ಯದಲ್ಲಿ ಸಂಘಟನೆಯ ಕಾರ್ಯಕರ್ತರು ಭಾಗಿಯಾಲ್ಲ. ಘಟನೆಯಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು ಪ್ರಾಮಾಣಿಕರ ವಿರುದ್ಧ ಅಲ್ಲ ಎಂದು ಸರಫ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.