ನವದೆಹಲಿ: ಆಡಳಿತ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಉತ್ತರಾಖಂಡದಲ್ಲಿ ಭಾನುವಾರ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತವನ್ನು ಹೇರಿಕೆ ಮಾಡಿದೆ. ವಿಧಾನಸಭೆಯನ್ನು ಅಮಾನತಿನಲ್ಲಿ ಇಡಲಾಗಿದೆ.
ಉತ್ತರಾಖಂಡದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ತುರ್ತು ಸಭೆಯನ್ನು ಕರೆದಿದ್ದರು. ಈ ವೇಳೆ ಗವರ್ನರ್ ಕೆಕೆಪೌಲ್ ಅವರು ಸ್ವೀಕರಿಸಿದ ಹಲವಾರು ವರದಿಗಳನ್ನು ಸಂಪುಟ ಪರಿಶೀಲನೆ ನಡೆಸಿತು.
ರಾಷ್ಟ್ರಪತಿ ಆಡಳಿತ ಹೇರುವುದು ಉಚಿತವೆಂದು ಕೆಕೆ ಪೌಲ್ ಅವರೂ ಅಭಿಪ್ರಾಯ ಪಟ್ಟ ಹಿನ್ನಲೆಯಲ್ಲಿ, ಎಲ್ಲಾ ವಿದ್ಯಾಮಾನಗಳ ಬಗ್ಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ವಿವರಿಸಲಾಯಿತು.
ಮುಖರ್ಜಿ ಅವರು ಸಂವಿಧಾನದ ಕಾಯ್ದೆ 356 ಅನ್ವಯ ಪ್ರೊಕ್ಲಮೇಶನ್ಗೆ ಸಹಿ ಹಾಕಿದರು.
ಉತ್ತರಾಖಂಡದ ಹರೀಶ್ ರಾವತ್ ಅವರ ಸರ್ಕಾರದ ವಿರುದ್ಧ 9 ಶಾಸಕರು ಬಂಡಾಯವೆದ್ದ ಬಳಿಕ ಅದು ಅಲ್ಪಮತಕ್ಕೆ ಕುಸಿದಿತ್ತು.
ಆದರೆ ಕೇಂದ್ರ ಸರ್ಕಾರ ಪಿತೂರಿ ಮಾಡಿ ರಾಷ್ಟ್ರಪತಿ ಆಡಳಿತ ಹೇರಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.