ಸುಳ್ಯ: ಇಲ್ಲಿನ ಪೆರಾಜೆಯ ಎನ್ವಿರಾನ್ಮೆಂಟ್ ಎಜುಕೇಶನ್ ಅಂಡ್ ಡೆವಲಪ್ಮೆಂಟ್ ಟ್ರಸ್ಟ್ ಮತ್ತು ವಿವಿಧ ಮಹಿಳಾ ಗುಂಪುಗಳ ಆಶ್ರಯದಲ್ಲಿ ಪರಿಸರ ಸ್ನೇಹಿ ಆಹಾರ ಕ್ರಮಗಳು ಮತ್ತು ಜನರ ಆರೋಗ್ಯ ಕುರಿತಾದ ಮಾಹಿತಿ ಸಂವಾದ ಹಾಗೂ ಗ್ರಾಮೀಣ ಪೌಷ್ಠಿಕ ಆಹಾರ ಮೇಳ ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ನಡೆಯಿತು.
ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ಡಾ.ರೋಹಿಣಿ ಡಿ.ಭಾರಧ್ವಜ್ ಭಾಗವಹಿಸಿ ಮಾಹಿತಿ ನೀಡಿ ಪರಂಪರಾಗತ ಆಹಾರ ಕ್ರಮಗಳ ಬದಲಾಗಿ ಆಧುನಿಕ ಪೇಟೆ ಆಧಾರಿತ ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ ಜನರ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮದ ಬಗ್ಗೆ ವಿವರಿಸಿದರು.
ಎನ್ವಿರಾನ್ಮೆಂಟ್ ಎಜ್ಯುಕೇಶನ್ ಅಂಡ್ ಡೆವಲಪ್ನೆಂಟ್ನ ಅಧ್ಯಕ್ಷ ಗೋಪಾಲ್ ಪೆರಾಜೆ ಮಾತನಾಡಿ ‘ಅಪೌಷ್ಠಿಕತೆ ಎನ್ನುವುದು ಒಂದು ರಾಷ್ಟ್ರೀಯ ಸಮಸ್ಯೆಯಾಗಿ ನಮ್ಮ ಮುಂದೆ ನಿಂತಿದೆ. ಈ ಹಿನ್ನಲೆಯಲ್ಲಿ ಪರಂಪರೆಯಿಂದ ಬಂದಿರುವ ಆಹಾರದ ಕ್ರಮಗಳನ್ನು ನಾವು ಉಳಿಸಿಕೊಳ್ಳುವ ಮುಖಾಂತರ ಸದೃಢ ಜನಾಂಗವೊಂದನ್ನು ರೂಪಿಸಬೇಕಾಗಿದೆ ಎಂದರು.
ಪೆರಾಜೆ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಎನ್.ಸಿ.ಶೀಲಾ, ಶ್ರೀಲಕ್ಷ್ಮೀ ಸ್ವಸಹಾಯ ಸಂಘದ ಅಧ್ಯಕ್ಷೆ ಶ್ರೀಲತಾ, ಅಮೃತವರ್ಷಿಣಿ ಸ್ರ್ತೀಶಕ್ತಿ ಸಂಘದ ಅಧ್ಯಕ್ಷೆ ಗಿರಿಜ, ಕಾವೇರಿ ಪ್ರಗತಿ ಸ್ವಸಹಾಯ ಸಂಘದ ಕಾರ್ಯದರ್ಶಿ ಹೇಮಾವತಿ ಹೊದ್ದೆಟ್ಟಿ, ಶ್ರೀನಿಧಿ ಸ್ವಸಹಾಯ ಸಂಘದ ಅಧ್ಯಕ್ಷೆ ವೇದಾವತಿ, ಚೈತನ್ಯ ಸ್ವಸಹಾಯ ಸಂಘದ ಅಧ್ಯಕ್ಷೆ ಎನ್.ಡಿ.ರಾಧಾ, ಸ್ಫೂರ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಜಲಜಾ ವೇದಿಕೆಯಲ್ಲಿದ್ದರು.
ಪೆರಾಜೆ ಜ್ಯೋತಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪುರುಷೋತ್ತಮ ಕಿರ್ಲಾಯ, ಜಿತೇಂದ್ರ ನಿಡ್ಯಮಲೆ, ಪದ್ಮಯ್ಯ ಕುಂಬಳಚೇರಿ, ಉಮೇಶ್ ವಳಲಂಬೆ, ವೇದಾವತಿ ಬಡ್ಡಡ್ಕ, ಕರುಣಾಕರ ನಿಡಿಂಜಿ, ಶ್ರೀಧರ ನಿಡ್ಯಮಲೆ, ಚಿದಾನಂದ ಹೊದ್ದೆಟ್ಟಿ, ಜಗದೀಶ ಕುಂಬಳಚೇರಿ, ಬಂಗಾರಕೋಡಿ ಚಿನ್ನಮ್ಮ ಹಾಗೂ ಮಹಿಳಾ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಅಶೋಕ ಪೀಚೆ ಸ್ವಾಗತಿಸಿ ಭವ್ಯ ನಿರೂಪಿಸಿದರು.
32 ಬಗೆಯ ಖಾದ್ಯಗಳು:
ಕಾರ್ಯಕ್ರಮದ ಅಂಗವಾಗಿ 32 ಬಗೆಯ ವಿವಿಧ ಗ್ರಾಮೀಣ ಆಹಾರ ಖಾದ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ನುಗ್ಗೆಸೊಪ್ಪು ಪತ್ರೋಡೆ, ಮಾವಿನಮಿಡಿ ಅಡಂಗಾಯಿ, ಪುನರ್ಪುಳಿ ರಸಂ, ಕೆಂಬಡೆ ಪಾಯಸ, ಪುಟ್ಟು, ಕುಚ್ಚುಲಕ್ಕಿ ಅನ್ನ, ಕಡ್ಲೆ ಗೇರು ಬೀಜಗಸಿ, ಮೆಂತೆ ಅಡುಗೆ, ಅಕ್ಕಿಬೆಲ್ಲದ ಹುಡಿ, ಪುಂಡಿ, ನೀರುದೋಸೆ, ಕಾವಲಿರೊಟ್ಟಿ, ಕಾಯಿಹೋಳಿಗೆ, ಕರ್ಜಿಕಾಯಿ, ಅಣಬೆ ಸಾರು, ಹಲಸಿನ ಚೊಂಗುಳಿ, ಅಡಿಕೆ ಪುಡಿ, ರಾಗಿಜೋಳ, ಹಲಸಿನ ಬೀಜ ಚಟ್ನಿ, ಹಲಸಿನ ತೋಳೆ ಪಲ್ಯ, ಪುದಿನ ಚಟ್ನಿ, ಬೇವಿನ ಸೊಪ್ಪನ ದೋಸೆ, ಅಪ್ಪದ ಹಿಟ್ಟು, ಹಾಲುಹಿಟ್ಟು, ತುಳಸಿ ಹಿಟ್ಟು, ರಾಗಿ ಅಡೆ, ಕಾರಿಹಿಟ್ಟು, ಕಾಯಿಚಟ್ನಿ, ನರೆಬೇರು, ಮರಗೆಣಸು ಪಲ್ಯ, ಹುಳಿದೋಸೆ, ಬಾಳೆಹಣ್ಣು, ಮಜ್ಜಿಗೆ, ಪೆಲ್ಲೊಡಿ ಇವುಗಳ ಪ್ರದರ್ಶನ ನಡೆದು ಸೇವಿಸುವ ಅವಕಾಶ ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.