ಬೆಳ್ತಂಗಡಿ : ಮಣ್ಣಿನ ಮೂರ್ತಿಗಳ ಹರಕೆಗೆ ಪ್ರಸಿದ್ದವಾಗಿರುವ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರೆ ಮಾ. 16 ರಿಂದ ಆರಂಭಗೊಂಡಿದ್ದು ಬ್ರಹ್ಮಶ್ರೀ ವೇ|ಮೂ| ಆಲಂಬಾಡಿ ಪದ್ಮನಾಭ ತಂತ್ರಿಗಳು ಹಾಗೂ ವೇ|ಮೂ| ಶ್ರೀನಿವಾಸ ಹೊಳ್ಳ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಭಾನುವಾರ ಶ್ರೀ ಸದಾಶಿವರುದ್ರ ದೇವರ ದರ್ಶನ ಬಲಿ ಉತ್ಸವ ನಡೆಯಿತು. ಊರ ಹಾಗೂ ಪರವೂರ ಭಕ್ತಾಧಿಗಳು ಜಾತ್ರಾ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಭಾನುವಾರ ಬೆಳಿಗ್ಗೆ ಗಂಟೆ 8-45 ರಿಂದ ಶ್ರೀ ಸದಾಶಿವರುದ್ರ ದೇವರ ದರ್ಶನ ಬಲಿ ಉತ್ಸವ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಉತ್ಸವ ಹೊರಟು, ನೃತ್ಯಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಶಯನೋತ್ಸವ ನಡೆಯಿತು.
ಮಾ. 16 ರಂದು ಪ್ರತಿಷ್ಠಾ ವಾರ್ಷಿಕೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಮಾ. 17 ರಂದು ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನ ಸಂತರ್ಪಣೆ, ಮಾ. 18 ರಂದು ಮಧ್ಯಾಹ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ, ಸಂಜೆ ಸುರ್ಯಗುತ್ತು ಮನೆಯಿಂದ ಭಂಡಾರ ಹೊರಡುವುದು, ರಾತ್ರಿ ವಸಂತಕಟ್ಟೆ ಪೂಜೆ, ಮಹಾಪೂಜೆ ನಡೆಯಿತು. ಮಾ. 19 ರಂದು ಸೊಡರ ಬಲಿ ಉತ್ಸವ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಕೆರೆಕಟ್ಟೆ ಪೂಜೆ, ಮಹಾಪೂಜೆ ನಡೆಯಿತು. ಮಾ. 16 ರಿಂದ 20 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಮಾ.21 ರಂದು ಬೆಳಿಗ್ಗೆ ಗಂಟೆ 9 ರಿಂದ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6 ರಿಂದ ಯಾತ್ರಾ ಹೋಮ, ಅವಭೃತ ಸ್ನಾನಕ್ಕೆ ಹೊರಡುವುದು, ರಾತ್ರಿ 10-30 ಕ್ಕೆ ಧ್ವಜಾವರೋಹಣ, ರಾತ್ರಿ ಗಂಟೆ 11 ರಿಂದ ದೈವಗಳ ನೇಮ ನಡೆಯಲಿದೆ. ಈ ಸಂದರ್ಭ ಆಡಳ್ತೆ ಮೊಕ್ತೇಸರ ಸುಭಾಶ್ಚಂದ್ರ ಸುರ್ಯಗುತ್ತು, ಅಭಿವೃದ್ದಿ ಮಂಡಳಿ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ, ಸತೀಶ್ಚಂದ್ರ ಸುರ್ಯಗುತ್ತು, ಮುನಿರಾಜ ಅಜ್ರಿ ಮತ್ತು ಊರ ಹಾಗೂ ಪರವೂರ ಭಕ್ತಾಧಿಗಳು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.