ಚಂಡಿಗಢ: ಜಮ್ಮು-ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಹಿಮಪಾತವಾಗಲಿದ್ದು, ಜನರು ಈ ಪ್ರದೇಶಗಳಿಗೆ ಹೋಗದಂತೆ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದೆ.
ಚಂಡಿಗಢಮೂಲದ ಹಿಮ ಮತ್ತು ಹಿಮಪಾತ ಕುರಿತ ಅಧ್ಯಯನ ಸ್ಥಾಪನಾ ಕೇಂದ್ರ, ರಕ್ಷಣಾ ಸಂಷೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಭಾಗವಾಗಿ ಮುನ್ನೆಚ್ಚರಿಕೆ ರವಾನಿಸಿದೆ.
ಜಮ್ಮು- ಕಶ್ಮೀರದ ಬಾರಾಮುಲ್ಲಾ, ಕುಪ್ವಾರಾ, ಬಂಡಿಪುರ, ಕಾರ್ಗಿಲ್, ರಜೌರಿ, ಗಂದರ್ಬಲ್, ದೋಡ, ಪೂಂಫ್, ರಿಯಾಸಿ, ರಂಬನ್ ಪ್ರದೇಶಗಳಲ್ಲಿ ಮುನ್ನೆಚ್ಚರಿಎ ಕ್ರಮವಾಗಿ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ೨೪ ಗಂಟೆಗಳಲ್ಲಿ ಜಮ್ಮುವಿನ ಫರ್ಕಿಯಾನ್ ಪ್ರದೇಶದಲ್ಲಿ 66 ಸೆ.ಮೀ. ಹಿಮಪಾತ, ಝೆಡ್-ಗಲಿಯಲ್ಲಿ 41, ಬನಿಹಾಲ್ ಟಾಪ್ನಲ್ಲಿ 6 ಸೆ.ಮೀ, ಗುಲ್ಮಾರ್ಗ್ನಲ್ಲಿ 43 ಸೆ.ಮೀ, ಹದ್ದಾನ್ ತಾಜ್ನಲ್ಲಿ 28 ಸೆ.ಮೀ. ಹಾಗೂ ನೀಲಂ ಪ್ರದೇಶದಲ್ಲಿ 35 ಸೆ.ಮೀ. ಹಿಮವಾತವಾಗಿರುವುದಾಗಿ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.