ಶ್ರೀನಗರ: ಕೇಂದ್ರ ಒತ್ತಡಕ್ಕೆ ಮಣಿದು ಪ್ರತ್ಯೇಕತಾವಾದಿ ಮಸರತ್ ಆಲಂನನ್ನು ಬಂಧಿಸಲಾಗಿದೆ ಎಂಬ ಮಾತನ್ನು ಪಿಡಿಪಿ ವಕ್ತಾರ ವಹೀದ್ ಪಾರ ಅಲ್ಲಗೆಳೆದಿದ್ದಾರೆ.
‘ಯಾವುದೇ ಒತ್ತಡಕ್ಕೆ ಮಣಿದು ನಾವು ಆಲಂನನ್ನು ಬಂಧಿಸಿಲ್ಲ. ಪ್ರಕ್ರಿಯೆಯಂತೆ ಸರ್ಕಾರ ನಡೆದುಕೊಂಡಿದೆ. ಈ ವಿಷಯವನ್ನು ವಿಜೃಂಭಣೆ ಮಾಡಬಾರದು. ಜಮ್ಮು ಕಾಶ್ಮೀರ ಪೊಲೀಸರು ತಮ್ಮ ಸ್ವ ನಿರ್ಧಾರದಿಂದ ಏನನ್ನೂ ಮಾಡುವುದಿಲ್ಲ ಎಂಬಂತೆ ಬಿಂಬಿಸಬೇಡಿ. ರಾಜ್ಯ ಗೃಹಸಚಿವಾಲಯದ ಸೂಚನೆ ಮೇರೆಗೆ ಆತನ ಬಂಧನವಾಗಿದೆ’ ಎಂದು ವಹೀದ್ ಹೇಳಿದ್ದಾರೆ.
ಅಲ್ಲದೇ ‘ಪ್ರತ್ಯೇಕತಾವಾದಿಗಳು ಕೂಡ ಭಾರತೀಯರೆ, ಅವರನ್ನು ಪಾಕಿಸ್ಥಾನಿಯರಂತೆ ನಡೆಸಿಕೊಳ್ಳಬಾರದು, ಅವರ ಸಿದ್ಧಾಂತಗಳು ಬೇರೆ ಇರಬಹುದು ಆದರೆ ಅವರನ್ನು ನಾವು ಪಾಕಿಗಳೆಂದು ಕಾಣಲು ಹೇಗೆ ಸಾಧ್ಯ. ಶತ್ರುಗಳಂತೆ ನಾವು ಅವರ ವಿರುದ್ಧ ಹೋರಾಡಬಾರದು’ ಎಂದಿದ್ದಾರೆ.
ಆಲಂ ಶ್ರೀನಗರದಲ್ಲಿ ಪಾಕ್ ಧ್ವಜ ಹಾರಿಸಿ, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದ, ಈ ಹಿನ್ನಲೆಯಲ್ಲಿ ಶುಕ್ರವಾರ ಆತನನ್ನು ಬಂಧನಕ್ಕೆ ಒಳಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.