ನಾಗ್ಪುರ: ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 47 ರನ್ಗಳ ಸೋಲು ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 126 ರನ್ಗಳ ಅಲ್ಪ ಮೊತ್ತವನ್ನೇ ಪೇರಿಸಿತ್ತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ 79 ರನ್ಗಳಿಗೆ ಆಲೌಟ್ ಆಗುವ ಮೂಲಕ ಆಘಾತಕಾರಿ ಸೋಲನುಭವಿಸಿದೆ.
ಧೋನಿ (30) ಹಾಗೂ ವಿರಾಟ್ ಕೊಹ್ಲಿ (23) ಹೊರತುಪಡಿಸಿ ಇನ್ನಾವುದೇ ಬ್ಯಾಟ್ಸ್ಮನ್ಗಳು ಎರಡಂಕೆಯ ಮೊತ್ತ ಗಳಿಸಲಿಲ್ಲ. ಧವನ್ (1), ರೋಹಿತ್ ಶರ್ಮ (5), ರೈನಾ (1), ಯುವರಾಜ್ (4), ಜಡೇಜಾ (5) ಬಹುಬೇಗನೇ ಪೆವಿಲಿಯನ್ ಹಾದಿ ಹಿಡಿದರು.
ನ್ಯೂಜಿಲೆಂಡ್ ಪರ ಜೇಮ್ಸ್ ಆಂಡರ್ಸನ್ (34) ಹಾಗೂ ಲ್ಯೂಕ್ ರಾಂಕಿ (21) ಅತಿ ಹೆಚ್ಚು ರನ್ ಪೇರಿಸಿದರು.
ಕಿವೀಸ್ ಪರ 4 ವಿಕೆಟ್ ಪಡೆದ ಮಿಚೆಲ್ ಸ್ಯಾಂಟ್ನರ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ ಇಂದರ್ಬೀರ್ ಸಿಂಗ್ ಸೋಧಿ 3 ವಿಕೆಟ್ ಪಡೆದು ಕಿವೀಸ್ ಜಯಕ್ಕೆ ಕಾರಣರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.