ಬಂಟ್ವಾಳ : ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಅಡ್ಲಬೆಟ್ಟು ಎಂಬಲ್ಲಿ ಜೀರ್ಣಾವಸ್ಥೆಯಲ್ಲಿರುವ ಸತ್ಯದೇವತೆ(ಪಾದ ಕಲ್ಲುರ್ಟಿ) ದೈವದ ಜೀರ್ಣೋದ್ದಾರ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಸಂಬಂಧ ಬುಡೋಳಿಗುತ್ತು ಚಂದ್ರಹಾಸ ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ, ಮಾಣಿ ಜಗದೀಶ್ ಜೈನ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸುಮಾರು 5 ರಿಂದ 6 ಲಕ್ಷ ರೂ ವೆಚ್ಚದಲ್ಲಿ ಈ ದೈವಸ್ಥಾನವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಇತ್ತೀಚೆಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಈ ದೈವಸ್ಥಾನವನ್ನು ಜೀರ್ಣೋದ್ದಾರ ಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಎಪ್ರಿಲ್ ತಿಂಗಳ ಒಳಗಾಗಿ ದೈವಸ್ಥಾನವನ್ನು ನಿರ್ಮಿಸಿ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಕೋಶಾಧಿಕಾರಿ ಅಣ್ಣಿ ಪೂಜಾರ ತಿಳಿಸಿದ್ದಾರೆ.
ಈ ದೈವ ಸ್ಥಾನಕ್ಕೆ ಸ್ಥಳೀಯ ದೇವಪ್ಪ ಗೌಡ ಎಂಬವರು ಸುಮಾರು 10 ಸೆಂಟ್ಸ್ ಸ್ಥಳವನ್ನು ದಾನವಾಗಿ ನೀಡಿರುತ್ತಾರೆ. ಈಗಾಗಲೇ ದೈವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿ ಬಾಲಾಲಯವನ್ನೂ ನಿರ್ಮಿಸಲಾಗಿದೆ. ಸಹೃದಯಿ ದಾನಿಗಳು ಇದಕ್ಕೆ ಸಹಕರಿಸುವಂತೆ ಅವರು ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.