ಮುಂಬಯಿ: ಮಹಾರಾಷ್ಟ್ರ ಮಹಾನ್ ನಾಯಕ ಶಿವಾಜೀಯನ್ನು ದಲಿತ ಎಂದು ಕರೆದಿದ್ದ ೪ನೇ ತರಗತಿಯ ಮಕ್ಕಳಿಗೆ ಪಠ್ಯವಾಗಿದ್ದ ಪುಸ್ತಕದ ಬಗ್ಗೆ ಸಂಸತ್ತಿನಲ್ಲಿ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಪ್ರಸ್ತಾಪಿಸಿದ ಬಳಿಕ ಆ ಪುಸ್ತಕವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ.
ಶಿವಸೇನೆಯೂ ಈ ಪುಸ್ತಕಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು, ಈ ಹಿನ್ನಲೆಯಲ್ಲಿ ಮುಂಬಯಿಯ ಮತುಂಗದಲ್ಲಿನ ಡಾನ್ ಬಾಸ್ಕೋ ಶಾಲೆ ಈ ವಿವಾದಾತ್ಮಕ ಪುಸ್ತಕವನ್ನು ಪಠ್ಯದಿಂದ ಹಿಂದಕ್ಕೆ ಪಡೆದುಕೊಂಡಿದೆ. ಈ ವಿಷಯವನ್ನು ಅರ್ಕ್ಡಿಯೋಸಿಸ್ ಆಫ್ ಬಾಂಬೆ ಫಾದರ್ ನಿಗೆಲ್ ಬರೆಟ್ಟ್ ಸ್ಪಷ್ಟಪಡಿಸಿದ್ದಾರೆ.
4ನೇ ತರಗತಿಯ ಇತಿಹಾಸ ಶಿಕ್ಷಕರು ತೀಸ್ತಾ ಸೆಟಲ್ವಾಡ್ ಬರೆದ ಪುಸ್ತಕವನ್ನು ಬಳಸುತ್ತಿದ್ದಾರೆ ಎಂದು ಸ್ಮೃತಿ ಸಂಸತ್ತಿನಲ್ಲಿ ಹೇಳಿದ್ದರು. ಆದರೆ 2004 ರಿಂದ ಈ ಪುಸ್ತಕವನ್ನು ನಾವು ಬಳಕೆ ಮಾಡುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.