ಗಾಂಧಿನಗರ: ಗುಜರಾತ್ ರಾಜ್ಯವನ್ನು ಪ್ರವಾಸಿ ತಾಳವಾಗಿ ಉತ್ತೇಜಿಸುವ ಉದ್ದೇಶದಿಂದ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ನಾಲ್ಕನೇ ಆವೃತ್ತಿಯ ವೈಬ್ರೆಂಟ್ ಗುಜರಾತ್ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್ ಉದ್ಘಾಟನೆಗೊಂಡಿದೆ.
ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಉದ್ಘಾಟಿಸಿದ್ದು, ವಿಶ್ವದಾದ್ಯಂತ 47 ರಾಷ್ಟ್ರಗಳು ಮತ್ತು ಭಾರತದ 20 ರಾಜ್ಯಗಳ ಪ್ರವಾಸ ವೃತ್ತಿಪರರು ಭಾಗವಹಿಸಲಿದ್ದಾರೆ.
ವಿಶ್ವದಾದ್ಯಂತ ರಾಷ್ಟ್ರಗಳಿಂದ ಗುರುತಿಸಲ್ಪಟ್ಟಿರುವ ಗುಜರಾತ್ನ ವಿವಿಧ ಪ್ರವಾಸಿ ತಾಣಗಳನ್ನು ವೈಬ್ರೆಂಟ್ ಗುಜರಾತ್ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್ ಮೂಲಕ ತೋರಿಸಲಾಗುವುದು. ನಾವು ಅತ್ಯಂತ ವೇಗದ ರೀತಿಯಲ್ಲಿ ಈ ವಲಯದಲ್ಲಿ ಪ್ರಚುರಪಡಿಸಲು ಬಯಸಿದ್ದು, ಈ ಉದ್ದೇಶದಿಂದ ಶೃಂಗಸಭೆ ನಡೆಸಲಾಗುತ್ತಿದೆ ಎಂದು ಗುಜರಾತ್ ಪ್ರವಾಸೋದ್ಯಮ ಸಚಿವ ಸೌರಭ್ಭಾಯ್ ಪಟೇಲ್ ಹೇಳಿದ್ದಾರೆ.
ಈ ಟ್ರಾವೆಲ್ ಮಾರ್ಟ್ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರ ಮಾರ್ಗದರ್ಶನದಲ್ಲಿ 2011ರಲ್ಲಿ ಆರಂಭಿಸಲಾಗಿತ್ತು ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.