ಹೈದರಾಬಾದ್: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುವವರ ವಿರುದ್ಧ ಹೈದರಾಬಾದ್ನ ಟ್ರಾಫಿಕ್ ಪೊಲೀಸರು ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರ ಕುತ್ತಿಗೆಗೆ ಹೂವಿನ ಹಾರ ಹಾಕಿ ಸನ್ಮಾನಿಸುವ ಅಭಿಯಾನ ಇದಾಗಿದ್ದು, ಈ ಮೂಲಕ ಗಲೀಜು ಮಾಡಿದವರನ್ನು ಸಾರ್ವಜನಿಕವಾಗಿ ಮುಜುಗರಕ್ಕೊಳಪಡಿಸಲಾಗುತ್ತಿದೆ. ಬಳಿಕ ಸಾರ್ವಜನಿಕ ಸ್ಥಳವನ್ನು ಗಲೀಜು ಮಾಡದೆ ಶೌಚಾಲಯಗಳನ್ನು ಬಳಸುವಂತೆ ಅವರಿಗೆ ಮನವಿ ಮಾಡಲಾಗುತ್ತದೆ.
ಈ ರೀತಿಯಾಗಿ ಇದುವರೆಗೆ ಸಿಕ್ಕಿಬಿದ್ದ ೨೬ ಮಂದಿಗೆ ಸನ್ಮಾನ ಮಾಡಲಾಗಿದೆ.
ಮಹನ್ಕಲಿ ಟ್ರಾಫಿಕ್ ಪೊಲೀಸ್ ಸ್ಟೇಷನ್ ಸಿಬ್ಬಂದಿಗಳು ಇನ್ಸ್ಪೆಕ್ಟರ್ ಟಿ.ರಾಮ ಸ್ವಾಮಿ ಎಂಬುವವರ ನೇತೃತ್ವದಲ್ಲಿ ಈ ಅಭಿಯಾನವನ್ನು ಆರಂಭಿಸಿದ್ದಾರೆ.
‘ಸ್ವಚ್ಛ ಹೈದರಾಬಾದ್’ ಅಭಿಯಾನಕ್ಕೆ ಇದು ನಮ್ಮ ಸಣ್ಣ ಕೊಡುಗೆ ಎಂದು ರಾಮಸ್ವಾಮಿ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.