ಅಹ್ಮದಾಬಾದ್; ಉಗ್ರರ ದಾಳಿಯ ಸಾಧ್ಯತೆ ಹಿನ್ನಲೆಯಲ್ಲಿ ಗುಜರಾತಿನ ಪ್ರಸಿದ್ಧ ದೇವಾಲಯಗಳಲ್ಲಿ ಬುಧವಾರ ಹೈಅಲರ್ಟ್ ಘೋಷಿಸಲಾಗಿದೆ. 26/11 ಮುಂಬಯಿ ದಾಳಿಯ ಮಾಸ್ಟರ್ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿ ಬಿಡುಗಡೆಯ ಬಳಿಕ ಭಾರತದ ಮೇಲೆ ದಾಳಿಗಳು ನಡೆಯುವ ಅಪಾಯ ಹೆಚ್ಚಾಗಿದೆ.
ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ, ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ ಲಷ್ಕರ್-ತೋಯ್ಬಾ ಗುಜರಾತಿನಲ್ಲಿನ ಅಕ್ಷರಧಾಮ ದೇಗುಲ, ಸೋಮನಾಥ ದೇಗುಲ ಸೇರಿದಂತೆ ಇತರ ಖ್ಯಾತ ದೇವಾಲಯಗಳ ಮೇಲೆ ದಾಳಿಯನ್ನು ನಡೆಸಲು ಸಂಚು ರೂಪಿಸಿದೆ.
ಈ ಹಿನ್ನಲೆಯಲ್ಲಿ ಭಾರತೀಯ ನೌಕಾ ಸೇನೆ ಗುಜರಾತ್ ಕರಾವಳಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ.
ನಿನ್ನೆಯಷ್ಟೇ ಮುಂಬಯಿ ಮೇಲೆ ದಾಳಿ ನಡೆಯುವ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.