ನವದೆಹಲಿ: ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ನನ್ನು ತಿಹಾರ್ ಜೈಲಿನಲ್ಲಿ ಮಾರ್ಚ್ 2ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ದೆಹಲಿ ಕೋರ್ಟ್ ತೀರ್ಪು ನೀಡಿದೆ.
ಇದಕ್ಕೂ ಮುನ್ನ ಇಂದು ಮುಂಜಾನೆ ಕನ್ಹಯ್ಯ ಕುಮಾರ್ನನ್ನು ಪಾಟಿಯಾಲಾ ಹೌಸ್ ಕೋರ್ಟ್ಗೆ ಹಾಜರುಪಡಿಸುವ ಸಂದರ್ಭ ಪತ್ರಕರ್ತರು, ವಕೀಲರ ಮೇಲೆ ಹಲ್ಲೆ ನಡೆದಿತ್ತು. ಕನ್ಹಯ್ಯ ಕುಮಾರ್ ಮೇಲೆ ಕೂಡ ಹಲ್ಲೆ ನಡೆಸಲಾಗಿತ್ತು.
ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಸುಪ್ರೀಂ ಕೋರ್ಟ್ 6 ಮಂದಿಯ ವಕೀಲರ ತಂಡ ಮತ್ತು ಪೊಲೀಸರನ್ನು ನಿಯೋಜಿಸಿ ಸುಪ್ರೀಂ ಕೋರ್ಟ್ನ ಜಸ್ಟೀಸ್ ಜೆ. ಚೆಳಮೇಶ್ವರ ಮತ್ತು ಅಭಯ್ ಮನೋಹರ್ ಸಾಪ್ರೆ ಒಳಗೊಂಡ ನ್ಯಾಯಪೀಠ ಪಾಟಿಯಾಲಾ ಹೌಸ್ ಕೋರ್ಟ್ ಮ್ಯಾಜಿಸ್ಟ್ರೇಟ್ಗೆ ಸೂಸಿದ್ದಾರೆ.
ನಂತರ ಹಿರಿಯ ವಕೀಲ ಇಂದಿರಾ ಜಯಸಿಂಗ್ ಅವರು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅವರ ಕೋರ್ಟ್ ಬಾಗಿಲು ಮುಚ್ಚಲಾಗಿದೆ ಎಂಬ ಮಾಹಿತಿ ದೊರೆತ ಬಳಿಕ ಸುಪ್ರೀಂ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.