ನವದೆಹಲಿ: ದೆಹಲಿ ಪೊಲೀಸ್ ಕಮಿಷನರ್ ಆಗಿರುವ ಬಿಎಸ್ ಬಸ್ಸಿ ಅವರಿಗೆ ಶೀಘ್ರದಲ್ಲೇ ಪ್ರೊಮೋಷನ್ ಸಿಗುವ ಸಾಧ್ಯತೆ ಇದೆ. ಅವರನ್ನು ಮಾಹಿತಿ ಕಮಿಷನರ್ ಆಗಿ ನೇಮಕಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಫೆ.19ರಂದು ಆಯ್ಕೆ ಸಮಿತಿ ಮಾಹಿತಿ ಕಮಿಷನರ್ ಅವರ ಆಯ್ಕೆಯನ್ನು ಅಂತಿಮಗೊಳಿಸಲಿದೆ. ಫೆಬ್ರವರಿ ಅಂತ್ಯದಲ್ಲಿ ಬಸ್ಸಿ ಅವರು ಪೊಲೀಸ್ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಬಸ್ಸಿಯವರಿಗೆ ಪ್ರೊಮೋಷನ್ ನೀಡುತ್ತಿರುವುದಕ್ಕೆ ಎಎಪಿ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ, ದೆಹಲಿ ಆಡಳಿತ ಸರಿಯಾಗಿ ನೋಡಿಕೊಳ್ಳಲಾಗದವರಿಗೆ ಪ್ರೊಮೋಷನ್ ನೀಡುತ್ತಿರುವುದು ಆಘಾತಕಾರಿ ಎಂದಿದೆ.
ಬಸ್ಸಿ ಅವರ ಪ್ರತಿ ನಡೆಯನ್ನೂ ಎಎಪಿ ವಿರೋಧಿಸುತ್ತಲೇ ಬಂದಿದೆ. ಅದರೆ ಎಎಪಿ ಸರ್ಕಾರವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಎಷ್ಟೋ ಕಾರ್ಯಗಳನ್ನು ಬಸ್ಸಿ ಮಾಡಿದ್ದಾರೆ. ಇದು ಎಎಪಿ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.