ಚೆನ್ನೈ: ಸಾವಿನ ಮನೆಯಲ್ಲೂ ಎಐಎಡಿಎಂಕೆ ಮುಖಂಡರು ರಾಜಕೀಯ ಮಾಡುವುದನ್ನು ಮರೆಯುವುದಿಲ್ಲ. ಸಿಯಾಚಿನ್ ಹಿಮಪಾತದಲ್ಲಿ ಹುತಾತ್ಮನಾದ ಯೋಧನ ಪಾರ್ಥಿವ ಶರೀರದ ಪೆಟ್ಟಿಗೆಯ ಎದುರು ಮುಖ್ಯಮಂತ್ರಿ ಜಯಲಲಿತಾರವರ ಫೋಟೋ ತೋರಿಸಿ ಸಣ್ಣತನ ಪ್ರದರ್ಶಿಸಿದ್ದಾರೆ.
ಯೋಧ ಜಿ. ಗಣೇಶನ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಮಂಗಳವಾರ ಮಧುರೈನಲ್ಲಿ ನೆರವೇರಿಸಲಾಗಿತ್ತು. ಈ ವೇಳೆ ಸಚಿವ ಸೆಲ್ಲೂರ್ ಕೆ. ರಾಜು ಅವರು ಅಲ್ಲಿಗೆ ಆಗಮಿಸಿ ಹುತಾತ್ಮ ಯೋಧನ ಕುಟುಂಬಕ್ಕೆ10 ಲಕ್ಷ ವಿತರಣೆ ಮಾಡಿದರು.
ಆದರೆ ಚೆಕ್ ನೀಡಿದವರು ಯಾರು ಎಂಬುದು ತಿಳಿಯಲಿ ಎಂಬ ಕಾರಣಕ್ಕೆ ಶವಪೆಟ್ಟಿಗೆಯ ವಿರುದ್ಧ ಭಾಗದಲ್ಲಿ ಜಯಲಲಿತಾ ಅವರ ಫೋಟೋವನ್ನು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೇ ಯೋಧನ ತಾಯಿಗೆ ಇವರೇ ಚೆಕ್ ನೀಡಿದ್ದು ಎಂದು ಸಾಂಕೇತಿಕವಾಗಿ ತಿಳಿಸಿದ್ದಾರೆ.
ಸಚಿವನ ಈ ಸಣ್ಣತನದಿಂದಾಗಿ ದುಃಖದ ನಡುವೆಯೂ ತಾಯಿ ಜಯಲಲಿತಾ ಫೋಟೋಗೆ ಕೈಮುಗಿಯಬೇಕಾಯಿತು.
ಅದೇನೆಯಿರಲಿ ಸಾವಿನ ಮನೆಗೆ ಬಂದು ಈ ರೀತಿ ಸಣ್ಣ ತೋರಿಸುತ್ತಿರುವ ರಾಜಕಾರಣಿಗಳು ನಮ್ಮ ದೇಶದಲ್ಲಿರುವುದು ನಾಚಿಕೆಗೇಡು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.