ಲಕ್ನೋ: ಎ.14ರಂದು ದೇಶ ಡಾ.ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದರೆ, ಉತ್ತರಪ್ರದೇಶದ ರಾಮ್ಪುರದಲ್ಲಿ ಸುಮಾರು 800 ಮಂದಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜನ ತಮ್ಮ ಮನೆ ಧ್ವಂಸವಾಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಇಸ್ಲಾಂ ಮತಕ್ಕೆ ಮತಾಂತರಗೊಂಡಿದ್ದಾರೆ.
ರಾಮ್ಪುರ ಜಿಲ್ಲಾಡಳಿತ ಅಲ್ಲಿನ ಕೆಲವೊಂದು ಮನೆಗಳನ್ನು ಧ್ವಂಸ ಮಾಡುವುದಾಗಿ ಕೆಲ ದಿನಗಳ ಹಿಂದೆ ನೋಟಿಸ್ ನೀಡಿತ್ತು. ಉತ್ತರಪ್ರದೇಶದ ಸಚಿವ ಅಜಂಖಾನ್ ಅವರ ಕೃಪಕಟಾಕ್ಷದಿಂದ ಈ ಜಾಗದಲ್ಲಿ ಶಾಪಿಂಗ್ ಮಾಲನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂಬುದು ಸ್ಥಳೀಯರ ಆರೋಪ. ಅಜಂಖಾನ್ ಈ ಕ್ಷೇತ್ರದ ಶಾಸಕನೂ ಹೌದು.
ಹೀಗಾಗಿ ತಮ್ಮ ಮನೆ ಧ್ವಂಸವಾಗುವುದನ್ನು ತಪ್ಪಿಸಲು ಇಲ್ಲಿನ 800 ಮಂದಿ ಇಸ್ಲಾಂ ಧರ್ಮಕ್ಕೆ ಮತಾಂತಗೊಂಡಿದ್ದಾರೆ. ಇದರಿಂದಾಗಿಯೂ ಕಟ್ಟಾ ಇಸ್ಲಾಂ ವಾದಿ ಅಜಂಖಾನ್ ಮನಪರಿವರ್ತನೆ ಆಗಿ ತಮ್ಮ ಮನೆ ಉಳಿಯಬಹುದೆಂಬ ಆಸೆ ಇವರದ್ದು.
ಮತಾಂತರ ಪ್ರಕ್ರಿಯೆ ನಡೆಸಲು ಸ್ಥಳೀಯ ಖಾಜಿಯೊಬ್ಬನನ್ನೂ ಆಹ್ವಾನಿಸಲಾಗಿತ್ತು, ಆದರೆ ಆತ ಗೈರು ಹಾಜರಾಗಿದ್ದಾನೆ. ಕೊನೆಗೆ ಇವರು ಇಸ್ಲಾಂ ಟೋಪಿ ತೊಡುವ ಮೂಲಕ ತಾವಾಗಿಯೇ ಮತಾಂತರಗೊಂಡಿದ್ದಾರೆ.
ನಮ್ಮ ಮತಾಂತರ ಕೇವಲ ಸಾಂಕೇತಿಕವಾದದ್ದು, ನಮಗೆ ಇಸ್ಲಾಂನ ಮೇಲೆ ಯಾವುದೇ ನಂಬಿಕೆ ಇಲ್ಲ, ಮನೆ ಉಳಿಸುವ ಸಲುವಾಗಿ ಈ ರೀತಿ ಮಾಡಿದ್ದೇವೆ ಎಂದು ಕೆಲವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ವಿಎಚ್ಪಿ ಸೇರಿದಂತೆ ಅನೇಖ ಹಿಂದೂಪರ ಸಂಘಟನೆಗಳು ಇದಕ್ಕೆ ತೀವ್ರ ಆಕ್ರೋಶವ್ಯಕ್ತವಾಗಿದೆ. ಸ್ಥಳದಲ್ಲಿ ಜಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಿದೆ. ಈ ಪ್ರದೇಶಕ್ಕೆ ಸಂಸದ ಸಾಕ್ಷಿ ಮಹರಾಜ್, ವಿಎಚ್ಪಿ ನಾಯಕಿ ಸಾಧ್ವಿ ಪ್ರಾಚಿ ಮೊದಲಾದವರು ಆಗಮಿಸಿದ್ದಾರೆ.
ಅಜಂಖಾನ್ ಉತ್ತರಪ್ರದೇಶವನ್ನು ಪಾಕಿಸ್ಥಾನ ಮಾಡಲು ಹೊರಟಿದ್ದಾರೆ, ಸಮಾಜವಾದಿ ಸರ್ಕಾರ ಜಂಗಲ್ ರಾಜ್ ಮಾಡುತ್ತಿದೆ ಎಂದು ಇವರೆಲ್ಲ ಆರೋಪಿಸಿದ್ದಾರೆ.
ಈ ಘಟನೆ ನಿಜಕ್ಕೂ ನಮ್ಮ ವ್ಯವಸ್ಥೆಯನ್ನು ಅಣಕ ಮಾಡುವಂತಿದೆ. ನಮ್ಮನ್ನ ಆಳುವವರು ನಮ್ಮನ್ನು ಗುಂಡಿಗೆ ತಳ್ಳುತ್ತಿದ್ದಾರೆ. ಇಂತಹ ಜನಪ್ರತಿನಿಧಿಗಳಿಗೆ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.