ಜೈಪುರ: ನೋಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರು ಈ ವರ್ಷ ಬಾಲ ಕಾರ್ಮಿಕತನದ ವಿರುದ್ಧ ಎರಡು ಮಹತ್ವಾಕಾಂಕ್ಷೆಯ ಅಭಿಯಾನಗಳನ್ನು ಆರಂಭಿಸಲಿದ್ದಾರೆ.
‘ಮಿಲಿಯನ್ ಟು ಮಿಲಿಯನ್’ ಮತ್ತು ’ಅ ಬಿಗ್ಗೆಸ್ಟ್ ಮೋರಲ್ ಪ್ಲಾಟ್ಫಾರ್ಮ್’ಗಳನ್ನು ಅವರು ಆರಂಭಿಸಲಿದ್ದು, ಜಗತ್ತಿನಾದ್ಯಂತ ಮಕ್ಕಳ ಅತೀ ದೊಡ್ಡ ಧ್ವನಿಯಾಗಿ ಹೊರಹೊಮ್ಮಲಿದೆ.
‘100 ಮಿಲಿಯನ್ ಟು 100 ಮಿಲಿಯನ್’ ಅಭಿಯಾನಕ್ಕೆ ಯುವಕರನ್ನು, ವಯಸ್ಕರನ್ನು ಭಾಗಿಯನ್ನಾಗಿಸಲಿದ್ದು, ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಅಭಿಯಾನ ಆರಂಭಿಸಲಿದ್ದಾರೆ. ಜಗತ್ತಿನಾದ್ಯಂತ ತುಳಿತಕ್ಕೆ, ದೌರ್ಜನ್ಯಕ್ಕೆ ಒಳಗಾದ 100 ಮಿಲಿಯನ್ ಮಕ್ಕಳಿಗಾಗಿ ಇದನ್ನು ನಡೆಸಲಾಗುತ್ತಿದೆ.
ಬಿಗ್ಗೆಸ್ಟ್ ಮೋರಲ್ ಪ್ಲಾಟ್ಫಾಮ್ನಲ್ಲಿ ನೋಬೆಲ್ ಪುರಸ್ಕೃತರು, ಜಾಗತಿಕ ನಾಗಕರು ಮಕ್ಕಳ ದೌರ್ಜನ್ಯದ ವಿರುದ್ಧ ಒಂದೇ ವೇದಿಕೆಯಲ್ಲಿ ಧ್ವನಿ ಎತ್ತಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.