ಬಾಗ್ದಾದ್: ರಕ್ಕಸರಂತೆ ಮೆರೆದಾಡಿ ನೂರಾರು ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡಿದ್ದ ಇಸಿಸ್ ಎಂಬ ಭಯೋತ್ಪಾದಕರು ಇದೀಗ ಇರಾಕಿ ಸೇನೆಯ ದಾಳಿಯನ್ನು ತಡೆದುಕೊಳ್ಳಲಾಗದೆ ರಮದಿ ಪ್ರದೇಶದಿಂದ ಗಡ್ಡ ಬೋಳಿಸಿಕೊಂಡು ಮಹಿಳೆಯರ ಉಡುಪು ಧರಿಸಿ ಪರಾರಿಯಾಗಲೆತ್ನಿಸಿದ್ದಾರೆ.
ಸೇನಾ ಪಡೆಗಳನ್ನು ವಂಚಿಸಿ ಅವರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗುವ ಸಲುವಾಗಿ ಗಡ್ಡವನ್ನು ಬೋಳಿಸಿಕೊಂಡು, ಮಹಿಳೆಯರ ಉಡುಪನ್ನು ಧರಿಸಿ ರಮದಿ ನಗರದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಅವರನ್ನೆಲ್ಲ ನಾವು ಬಂಧಿಸಿದ್ದೇವೆ ಎಂದು ಇರಾಕ್ನ ಭದ್ರತಾ ಕಮಾಂಡರ್ ತಿಳಿಸಿದ್ದಾರೆ.
ಕಳೆದ ಮಂಗಳವಾರ ರಮದಿ ನಗರವನ್ನು ಇಸಿಸ್ ಉಗ್ರರ ಕೈಯಿಂದ ಇರಾಕಿ ಸೇನೆ ವಶಪಡಿಸಿಕೊಂಡಿತ್ತು. ರಮದಿ ಅನ್ಬರ್ ಪ್ರಾಂತ್ಯದ ರಾಜಧಾನಿಯಾಗಿದೆ. ಇದೀಗ ಅದು ಸಂಪೂರ್ಣ ಸೇನೆಯ ಕಂಟ್ರೋಲ್ಗೆ ಬಂದಿದೆ.
ನಗರದಲ್ಲಿ ಉಳಿದಿರುವ ಭಯೋತ್ಪಾದಕರು ಇದೀಗ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಗಡ್ಡ ಬೋಳಿಸುತ್ತಿದ್ದಾರೆ ಮತ್ತು ಮಹಿಳೆಯರ ದಿರಿಸನ್ನು ತೊಡುತ್ತಿದ್ದಾರೆ. ಸರ್ಕಾರಿ ಪಡೆಗಳ ಕೈಗೆ ಸಿಕ್ಕಿ ಹಾಕಿಕೊಳ್ಳಬಾರದು ಎಂಬ ಉದ್ದೇಶ ಅವರದ್ದು ಎಂದು ಕಮಾಂಡರ್ ಹೇಳಿದ್ದಾರೆ.
ಮಹಿಳೆಯರಂತೆ ಉಡುಪು ಧರಿಸಿದ್ದ 9 ಮಂದಿ ಇಸಿಸ್ ಉಗ್ರರನ್ನು ಬಂಧಿಸಿದ್ದೇವೆ ಎಂದಿದ್ದಾರೆ.
ಅದೇನೆಯಿರಲಿ ರಕ್ತಪಿಪಾಸುಗಳಂತೆ ವರ್ತಿಸುತ್ತಿದ್ದವರಿಗೂ ಇದೀಗ ಜೀವ ಭಯ ಉಂಟಾಗಿದೆ ಎಂಬುದು ಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.