×
Home About Us Advertise With s Contact Us

ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಲು ಬದ್ಧ: ಚೀನಾ

chinaಬೀಜಿಂಗ್: ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ತಾನು ಬದ್ಧನಾಗಿದ್ದೇನೆ ಎಂದು ಚೀನಾ ಹೇಳಿದೆ.

ಸೋಮವಾರ ಭಾರತ ಮತ್ತು ಚೀನಾದ ನಡುವೆ ನವದೆಹಲಿಯಲ್ಲಿ ಗಡಿ ಮಾತುಕತೆ ನಡೆದಿದ್ದು,  ಇಲ್ಲಿ ಉಭಯ ದೇಶಗಳು ಹಿಮಾಲಯ ಗಡಿಯಲ್ಲಿ ಶಾಂತಿ ಮತ್ತು ಪಾರದರ್ಶಕತೆ ಕಾಪಾಡಲು ಪರಸ್ಪರ ಒಪ್ಪಿಗೆ ಸೂಚಿಸಿವೆ.

ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಚೀನಾ ‘ಗಡಿ ವಿವಾದವನ್ನು ನಿಯಂತ್ರಿಸಲು, ಶಾಂತಿ ಮತ್ತು ಪಾರದರ್ಶಕತೆಯನ್ನು ಕಾಪಾಡಲು ಉಭಯ ದೇಶಗಳು ಬದ್ಧತೆಯನ್ನು ತೋರಿಸಿವೆ’ ಎಂದಿದೆ.

ಏಷ್ಯಾ ಖಂಡದ ಪ್ರಮುಖ ನೆರೆಹೊರೆ ಮತ್ತು ಅಭಿವೃದ್ಧಿ ಶೀಲ ದೇಶಗಳಾದ ಭಾರತ ಮತ್ತು ಚೀನಾದ ನಡುವೆ ಬಾಂಧವ್ಯ ಅಭಿವೃದ್ಧಿ ಜನರ ಒಳಿತಿಗಾಗಿ, ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗಾಗಿ ಅತ್ಯಗತ್ಯವಾಗಿದೆ ಎಂದು ತಿಳಿಸಿದೆ.

Tags:

 

Recent News

Back To Top
error: Content is protected !!