ನವದೆಹಲಿ: ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ನಡೆಸಿದ ಸುಪ್ರೀಂ, ಮಹಿಳಾ ತಾರತಮ್ಯದ ವಿರುದ್ಧ ಪ್ರಶ್ನೆ ಎತ್ತಿದೆ.
ವೇದ ಮತ್ತು ಉಪನಿಷದ್ಗಳಲ್ಲೇ ಮಹಿಳಾ ತಾರತಮ್ಯವಿಲ್ಲ, ಹೀಗಿರುವ ಶಬರಿಮಲೆಯಲ್ಲಿ ಯಾಕೆ ಇಂತಹ ತಾರತಮ್ಯ ಎಂದು ಶಬರಿಮಲೆ ದೇಗುಲದ ಉಸ್ತುವಾರಿ ಹೊತ್ತಿರುವ ತ್ರಿವಾಂಕೂರು ದೇವಾಸ್ವಂ ಬೋರ್ಡ್ನ್ನು ಸುಪ್ರೀಂ ಪ್ರಶ್ನಿಸಿದೆ.
’ಸನಾತನ ಧರ್ಮದಲ್ಲಿ ಹೆಣ್ಣು ಮತ್ತು ಗಂಡನ್ನು ಸಮಾನವಾಗಿ ನೋಡಲಾಗಿದೆ. ಆಧ್ಯಾತ್ಮ ಎನ್ನುವುದು ಕೇವಲ ಪುರುಷ ಪ್ರಭುತ್ವವೇ?’ ಎಂದು ಪ್ರಶ್ನಿಸಿದೆ.
ಈ ಬಗ್ಗೆ ದೇಗುಲ ಮಂಡಳಿ ಆರು ವಾರಗಳೊಳಗೆ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿರುವ ಸುಪ್ರಿಂ, ವಿಚಾರಣೆಯನ್ನು ಆರು ವಾರಗಳಿಗೆ ಮುಂದೂಡಿದೆ.
ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ಕೋರಿ ಜ.11ರಂದು ಪಿಟಿಷನ್ ಸಲ್ಲಿಸಿದ ಬಳಿ ಈ ವಿಷಯ ಭಾರೀ ಚರ್ಚೆಗೆ ಬಂದಿದೆ.
ಇದು ಧಾರ್ಮಿಕ ನಂಬಿಕೆಯಾಗಿದ್ದು, ಶಬರಿಮಲೆ ಆಡಳಿತ ತ್ರಿವಾಂಕೂರು ದೇವಸ್ವಂ ಬೋರ್ಡ್ ಬಳಿ ಇರುವುದರಿಂದ ತಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.