ನವದೆಹಲಿ: ಗುಜರಾತ್ನಲ್ಲಿ ಎನ್ಕೌಂಟರ್ನಲ್ಲಿ ಮೃತಳಾದ ಇಶ್ರತ್ ಜಹಾನ್ ಒರ್ವ ಮಾನವ ಬಾಂಬರ್ ಆಗಿದ್ದಳು, ಅವಳು ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಸದಸ್ಯೆಯಾಗಿದ್ದಳು ಎಂದು ಮುಂಬಯಿ ಸ್ಫೋಟ ಆರೋಪಿ ಡೇವಿಡ್ ಹೆಡ್ಲಿ ಹೇಳಿಕೆ ನೀಡಿದ್ದಾನೆ.
ಈ ಮೂಲಕ ನಕಲಿ ಎಂದೇ ಹೇಳಲಾಗುತ್ತಿದೆ ಗುಜರಾತಿನಲ್ಲಿ ನಡೆದ ಎನ್ಕೌಂಟರ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಆದರೆ ಈ ಹೇಳಿಕೆಯನ್ನು ಇಶ್ರತ್ ಸಹೋದರಿ ಮಶ್ರತ್ ತಳ್ಳಿಹಾಕಿದ್ದಾಳೆ. ನನ್ನ ಸಹೋದರಿ ಮುಗ್ಧೆ, ಆಕೆಯನ್ನು ನಕಲಿ ಎನ್ಕೌಂಟರ್ನಲ್ಲಿ ಕೊಲೆ ಮಾಡಲಾಗಿದೆ ಎಂದು ಮುಸರತ್ ಹೇಲಿಕೊಂಡಿದ್ದಾಳೆ. ಅಲ್ಲದೇ ಪಿತೂರಿ ನಡೆಸಿ ಇಶ್ರತ್ನನ್ನು ಕೊಲೆ ಮಾಡಲಾಗಿದ್ದು, ಇದರಲ್ಲಿ ದೊಡ್ಡ ದೊಡ್ಡವರ ಕೈವಾಡವಿದೆ ಎಂದಿದ್ದಾಳೆ.
ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಹೆಡ್ಲಿ ಹೇಳಿಕೆಯಿಂದ ಪಾಕಿಸ್ಥಾನದ ಮುಖ ಈಗ ಬಹಿರಂಗವಾಗಿದೆ ಎಂದಿದ್ದಾರೆ. ಆದರೆ ಆತ ಇಶ್ರತ್ ಬಗ್ಗೆ ನೀಡಿರುವ ಹೇಳಿಕೆ ಆ ಪ್ರಕರಣದ ತನಿಖೆ ಬಗ್ಗೆ ಯಾವುದೇ ಪ್ರಭಾವ ಬೀರಲ್ಲ ಎಂದಿದ್ದಾರೆ.
ಹೆಡ್ಲಿ ಹೇಳಿಕೆ ಇಶ್ರತ್ ಜಹಾನ್ನನ್ನು ಸಮರ್ಥಿಸಿಕೊಳ್ಳುವವರನ್ನು ತುಸು ಯೋಚಿಸುವಂತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.