ಕುಂಬಳೆ: ಎಡನಾಡು ಗ್ರಾಮದ ಹೊಸಮನೆ ನಿವಾಸಿ ಎಚ್. ಕೃಷ್ಣ ಭಟ್ ಮತ್ತು ಶ್ಯಾಮಲಾ ದಂಪತಿಯ ಪುತ್ರ ಮುರಳೀ ಶ್ಯಾಮ್ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಫಲಿತ ಜ್ಯೋತಿಷ ವಿಭಾಗದಲ್ಲಿ ‘ದೈವಜ್ಞ ಕಾಮಧೇನು ಗ್ರಂಥಸ್ಯ ಸಮೀಕ್ಷಾತ್ಮಕಮಧ್ಯಯನಮ್’ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಎಚ್ಡಿ.ಗೆ ಸಮಾನವಾದ ‘ವಿದ್ಯಾವಾರಿಧಿ ಪದವಿಯನ್ನು ಪಡೆದಿದ್ದಾರೆ.
ಅವರು ಪ್ರೊ. ರಾಧಾಕಾಂತ ಠಾಕೂರ್ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಫೆಬ್ರವರಿ 1ರಂದು ತಿರುಪತಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಮುರಳೀ ಶ್ಯಾಮ್ಗೆ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇವರು ಪೆರಡಾಲ ನವಜೀವನ ಪ್ರೌಢಶಾಲೆ ಮತ್ತು ಮುಜುಂಗಾವು ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ. ಪ್ರಸ್ತುತ ಮಧ್ಯಪ್ರದೇಶದ ಮಹರ್ಷಿ ಮಹೇಶ್ ಯೋಗಿ ವೇದ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.