ಸೂರತ್: ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜವನ್ನು ನಾಯಿಗೆ ಉಡಿಸಿ ದೇಶಕ್ಕೆ ಅವಮಾನ ಮಾಡಿದ ಸೂರತಿನ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಅಜೀಝ್ ಸೈಕಲ್ವಾಲಾ ಎಂಬುವವರು ನೀಡಿದ ದೂರಿನ ಮೇರೆಗೆ ಭರತ್ ಗೊಹ್ಲಿ ಎಂಬಾತನನ್ನು ಸೋಮವಾರ ಬಂಧಿಸಲಾಗಿದೆ.
ಪ್ರಾಣಿ ಪ್ರಿಯರ ಸಂಘಟನೆ ಜ.26ರಂದು ಆಯೋಜಿಸಿದ್ದ ‘ಪೆಟ್ ರನ್’ ಸ್ಪರ್ಧೆಯಲ್ಲಿ ತನ್ನ ಲ್ಯಾಬ್ರಡರ್ ನಾಯಿಯೊಂದಿಗೆ ಭಾಗವಹಿಸಿದ್ದ ಭರತ್, ಅದಕ್ಕೆ ತ್ರಿವರ್ಣ ಧ್ವಜದ ಉಡುಗೆಯನ್ನು ಹಾಕಿದ್ದ.
ಈ ಚಿತ್ರ ಸೋಶಲ್ ಮೀಡಿಯಾದಲ್ಲಿ ಹರಿದಾಡಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು, ಆತನ ವಿರುದ್ಧ ರಾಷ್ಟ್ರ ಘನತೆಗೆ ಧಕ್ಕೆ ಕಾಯ್ದೆ,`1971ರ ಅನ್ವಯ ಪ್ರಕರಣ ದಾಖಲು ಮಾಡಲಾಗಿತ್ತು.
ಈ ಕಾನೂನಿನ್ವಯ ರಾಷ್ಟ್ರೀಯ ಸಂಕೇತಕ್ಕೆ ಅವಮಾನ ಎಸಗಿದವರಿಗೆ 2 ವರ್ಷ ಸೆರೆವಾಸ ನೀಡಬಹುದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಣಿ ಪ್ರಿಯರ ಸಂಘ, ‘ನಾಯಿ ಪ್ರಿಯರಿಗೆ ನಾಯಿ ತಮ್ಮ ಮನೆ ಸದಸ್ಯನಿದ್ದಂತೆ, ರಾಷ್ಟ್ರ ಧ್ವಜವನ್ನು ಅದಕ್ಕೆ ಉಡಿಸಿ ದೇಶಕ್ಕೆ ಅವಮಾನ ಮಾಡುವ ಉದ್ದೇಶ ಆತನಿಗಿರುವುದಿಲ್ಲ. ಈ ಘಟನೆ ನಮ್ಮ ಗಮನಕ್ಕೆ ಬಂದ ತಕ್ಷಣ ಆತನನ್ನು ಹೊರಕ್ಕೆ ಕಳುಹಿಸಿದೆವು ಆದರೆ ಆಗಾಗಲೇ ಆ ಸುದ್ದಿ ಹಬ್ಬಿತು’ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.