ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವಾಲಯದ ಅಧಿಕೃತ YouTube ಚಾನೆಲ್ ಬಿಡುಗಡೆ ಮಾಡಿದ್ದಾರೆ.
ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹಣಕಾಸು ಸಚಿವಾಲಯದ ಮಾಹಿತಿ ಇರುವ YouTube ಚಾನಲ್ ಆರಂಭಿಸಿದೆ.
ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವಾಲಯವು ಅನೇಕ ಕ್ರಮ ಮತ್ತು ಘೋಷಣೆಗಳನ್ನು ಮಾಡುತ್ತಿರುತ್ತದೆ. ಈ ಮಾಹಿತಿಗಳು, ಚಟುವಟಿಕೆಗಳನ್ನು ವೀಡಿಯೋಗಳ ಮೂಲಕ ಜನರನ್ನು ಸಂಪರ್ಕಿಸಲು YouTube ಅನುಕೂಲವಾಗುತ್ತದೆ. ಕೆಲವು ಪ್ರಮುಖ ನಿರ್ಧಾರಗಳನ್ನು ಸಾರ್ವಜನಿಕ ವೇದಿಕೆಯಲ್ಲಿಡಲು ಈ ಉಪಕ್ರಮ ಸಹಾಯಕವಾಗಲಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ಇದರಲ್ಲಿ ಹಣಕಾಸು ಸಚಿವಾಲಯದ ಪ್ರಮುಖ ವೀಡಿಯೋಗಳು, ಘಟನೆಗಳು, ಪತ್ರಿಕಾಗೋಷ್ಠಿಗಳು, ಸಭೆ-ಸಮಾರಂಭಗಳಿಗೆ ಸಂಬಂಧಿಸಿದ ವಿಶೇಷ ವೀಡಿಯೋಗಳನ್ನು ಹೊಂದಲಿದೆ.
ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ರತನ್ ಪಿ. ವಾಟಾಳ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಂಠ ದಾಸ್, ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.