ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ರಹಸ್ಯ ಕಡತಗಳನ್ನು ನರೇಂದ್ರ ಮೋದಿ ಸರ್ಕಾರ ಸಾರ್ವಜನಿಕಗೊಳಿಸಿದ ಬಳಿಕ ನೇತಾಜಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳು ಬಹಿರಂಗವಾಗುತ್ತಲೇ ಇದೆ.
ಇದೀಗ ನೇತಾಜೀ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯ ಖಜಾನೆಗೆ ಸಂಬಂಧಿಸಿದ ಮಾಹಿತಿಯೊಂದು ಲಭ್ಯವಾಗಿದೆ. ಈ ಖಜಾನೆಯನ್ನು ಲೂಟಿ ಮಾಡಲಾಗಿತ್ತು ಮತ್ತು ಈ ಬೆಳವಣಿಗೆಯ ಬಗ್ಗೆ ಅಂದಿನ ಪ್ರಧಾನಿ ಜವಹಾರ್ ಲಾಲ್ ನೆಹರೂರವರಿಗೆ ಚೆನ್ನಾಗಿ ತಿಳಿದಿತ್ತು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.
ಭಾರತ ಮತ್ತು ಜಪಾನ್ ನಡುವೆ ನಡೆದ ಮಾತುಕತೆಯಿಂದ ನೇತಾಜೀ ಅವರ ಖಜಾನೆ ಕಳ್ಳತನವಾಗಿತ್ತು ಮತ್ತು ಈ ಬಗ್ಗೆ ನೆಹರೂ ಸರ್ಕಾರಕ್ಕೆ ತಿಳಿದಿತ್ತು. ಆದರೂ ಅದು ಈ ಬಗ್ಗೆ ಮೌನವಾಗಿ ಇರಲು ನಿರ್ಧರಿಸಿತು ಎಂಬುದಾಗಿ ತಿಳಿದು ಬಂದಿದೆ.
ನೇತಾಜೀ ಅವರ ಆಪ್ತರಾಗಿದ್ದ ಮುಂಗ ರಾಮಮೂರ್ತಿ ಮತ್ತು ಎಸ್ಎ ಅಯ್ಯರ್ ಅವರು ಐಎನ್ಎಸ್ ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಬಗ್ಗೆ ದಾಖಲೆಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.