ನವದೆಹಲಿ: ಜರ್ಮನಿಯ ನಿರಾಶ್ರಿತ ಶಿಬಿರದಲ್ಲಿ ತನ್ನ 8 ವರ್ಷದ ಮಗಳೊಂದಿಗೆ ಬಲವಂತವಾಗಿ ಇರಿಸಲ್ಪಟ್ಟಿದ್ದ ಭಾರತೀಯ ಮಹಿಳೆ ಕೊನೆಗೂ ಕೇಂದ್ರದ ನೆರವಿನಿಂದ ಪಾರಾಗಿದ್ದು, ತವರಿಗೆ ಹಿಂದಿರುಗುವಲ್ಲಿ ಯಶಸ್ವಿಯಾಗಿದ್ದಾಳೆ.
ಗುರುಪ್ರೀತ್ ಹರಿಯಾಣದ ಫರಿದಾಬಾದ್ನ ಮಹಿಳೆ ಮತ್ತು ಆಕೆಯ ಮಗನನ್ನು ಆಕೆಯ ಅತ್ತೆಯ ಮನೆಯವರು ಜರ್ಮನಿಯಲ್ಲಿ ನಿರಾಶ್ರಿತ ಶಿಬಿರದಲ್ಲಿ ಇಟ್ಟಿದ್ದರು.
ಫೆ.2, 2016ರಂದು ಆಕೆ ಹಿಂದಿಯಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿ ತನ್ನನ್ನು ರಕ್ಷಿಸುವಂತೆ ಭಾರತೀಯ ಸರ್ಕಾರವನ್ನು ಕೇಳಿಕೊಂಡಿದ್ದಳು. ಇದಕ್ಕೆ ತಕ್ಷಣ ಸ್ಪಂದಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಕೆಯನ್ನು ವಾಪಾಸ್ ಕರೆ ತರಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದರು.
ಗುರುಪ್ರೀತ್ ತಂದೆಯನ್ನು ಸಂಪರ್ಕಿಸಿ, ಜರ್ಮನಿಯಲ್ಲಿನ ಭಾರತೀಯ ರಾಯಭಾರ ಕಛೇರಿಯಿಂದ ಎಲ್ಲಾ ಮಾಹಿತಿಯನ್ನು ತರಿಸಿ ಗುರುಪ್ರೀತ್ನ ಬಿಡುಗಡೆಗೆ ಶ್ರಮಿಸಿದರು.
ಇದರ ಫಲವಾಗಿ ಗುರುಪ್ರೀತ್ ಭಾರತಕ್ಕೆ ಆಗಮಿಸಿದ್ದಾರೆ, ತನ್ನನ್ನು ತವರು ಸೇರಿದಂತೆ ಮಾಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.