ನ್ಯೂಯಾರ್ಕ್: ಅತೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ವಾಟ್ಸಾಪ್ ಗ್ರೂಪ್ನಲ್ಲಿ ಇದೀಗ 100ಕ್ಕಿಂತಲೂ ಹೆಚ್ಚು ಮಂದಿ ಸ್ನೇಹಿತರಾಗಬಹುದು. ವಾಟ್ಸಾಪ್ ಗ್ರೂಪ್ನ ಸ್ನೇಹಿತರ ಸಂಖ್ಯಾ ಮಿತಿ ಈಗ 256ಕ್ಕೆ ಹೆಚ್ಚಳವಾಗಿದೆ.
ಈ ಆಯ್ಕೆ ಬಳಕೆದಾರರಿಗೆ ಇನ್ನಷ್ಟೇ ಲಭ್ಯವಾಗಬೇಕಾಗಿದ್ದು, ವಾಟ್ಸಾಪ್ನ ಇತರ ಎಲ್ಲಾ ಫೀಚರ್ಗಳಂತೆ ಇದನ್ನೂ ಆಂಡ್ರಾಯ್ಡ್ ಆಪ್ ಮುಖೇನ ಇದರ ವೆಬ್ಸೈಟ್ನಿಂದ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
2014ರ ನವೆಂಬರ್ನಲ್ಲಿ 50 ಇದ್ದ ಸ್ನೇಹಿತರ ಮಿತಿಯನ್ನು 100ಕ್ಕೆ ಏರಿಸಲಾಗಿತ್ತು, ಇದೀಗ ಅದನ್ನು 256ಕ್ಕೆ ಏರಿಕೆ ಮಾಡಲಾಗಿದೆ.
ಈಗಾಗಲೇ ವಾಟ್ಸಾಪ್ ಬಳಕೆದಾರರ ಸಂಖ್ಯೆ ಒಂದು ಬಿಲಿಯನ್ ತಲುಪಿದೆ. ಇದು ವಾಟ್ಸಾಪ್ನ ಏರುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.