ಜೈಪುರ : ಪಾಕಿಸ್ಥಾನದಿಂದ ಕಾರ್ಯಾಚರಿಸುತ್ತಿರುವ ಉಗ್ರರನ್ನು ನಿಗ್ರಹಿಸಲು ಪಾಕಿಸ್ಥಾನ ಕಠಿಣ ಕ್ರಮಕೈಗೊಂಡಲ್ಲಿ ಭಾರತವು ಪಾಕಿಸ್ಥಾನಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಹೇಳಿದೆ.
ಭಾರತದಲ್ಲಿ ಉಗ್ರರ ದಾಳಿಗಳು ಹೆಚ್ಚುತ್ತಿದ್ದು, ಈ ದಾಳಿಗಳಿಗೆ ಪಾಕಿಸ್ಥಾನದಲ್ಲಿ ಹುಟ್ಟಿಕೊಂಡಿರುವ ಉಗ್ರರ ಸಂಘಟನೆಗಳೇ ಪ್ರಮುಖ ಕಾರಣವಾಗಿದ್ದು, ಇದರಿಂದ ಭಾರತ ಮತ್ತು ಪಾಕಿಸ್ಥಾನದ ಸಂಬಂಧ ಇನ್ನಷ್ಟು ಹದಗೆಡುತ್ತಿದೆ. ಪಾಕಿಸ್ಥಾನವು ಉಗ್ರರನ್ನು ದಮನಿಸಲು ಮುಂದಾದರೆ ಭಾರತ-ಪಾಕಿಸ್ಥಾನ ದ್ವಿಪಕ್ಷೀಯ ಸಂಬಂಧಗಳು ಸುಧಾರಣೆಗೊಂಡು, ದಕ್ಷಿಣ ಏಷ್ಯಾ ಪ್ರಾಂತದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಗೊಳ್ಳಲು ಸಹಕಾರಿಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ಥಾನದಲ್ಲಿರುವ ಉಗ್ರ ಸಂಘಟನೆಗಳು ಸಂಚು ರೂಪಿಸುತ್ತಿವೆ. ಇಂತಹ ಸಂಘಟನೆಗಳ ಉಗ್ರರನ್ನು ದಮನಿಸಲು ಪಾಕಿಸ್ಥಾನವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಪ್ರಾಮಾಣಿಕತೆಯನ್ನು ತೋರಬೇಕು. ಇಂಥಹ ನಿರ್ಣಾಯಕ ಕ್ರಮಗಳನ್ನು ಕೈಗೊಂಡಲ್ಲಿ ಭಾರತವು ಸರ್ವ ರೀತಿಯಲ್ಲೂ ಬೆಂಬಲ ನೀಡಲು ಸಿದ್ಧ. ಇದರಿಂದ ಎರಡೂ ದೇಶಗಳ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.