ಚೆನ್ನೈ: ಭಾರತದ 2000ಕ್ಕೂ ಅಧಿಕ ಮಹಿಳೆಯರು ಕ್ರೋಷೆ ಕಂಬಳಿ ನೇಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.
6 ತಿಂಗಳ ಕಾಲ ನಿರಂತರವಾಗಿ ನೇಯ್ಗೆ ಕಾರ್ಯ ಮಾಡಿದ ಈ ಮಹಿಳೆಯರ ತಂಡ 11,148 ಚದರ ಮೀಟರ್ನಷ್ಟು ಜಾಗಕ್ಕೆ ಹರಡಿಸಬಲ್ಲ ಕಂಬಳಿ ನೇಯ್ದಿದ್ದಾರೆ. ಇದು ಫುಟ್ಬಾಲ್ ಕ್ರೀಡಾಂಗಣದ ಒಂದೂವರೆ ಪಟ್ಟು ದೊಡ್ಡದಾಗಿದೆ.
’ಮದರ್ ಇಂಡಿಯಾ ಕ್ರೋಷೆ ಕ್ವೀನ್ಸ್’ ಎಂದು ಕರೆಯಲ್ಪಡುವ ಈ ತಂಡದಲ್ಲಿ ವಿಶ್ವದ 14 ರಾಷ್ಟ್ರಗಳಿಂದ ಮಹಿಳೆಯರು ಭಾಗವಹಿಸಿದ್ದರು. ಈ ಮಹಿಳೆಯರು ಕೇವಲ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದದೆ ಒಂದು ಉದಾತ್ತ ಕಾರಣಕ್ಕಾಗಿ ಈ ಕಾರ್ಯದಲ್ಲಿ ಜೊತೆಗೂಡಿದ್ದಾರೆ.
ಇದೀಗ ಈ ಕಂಬಳಿಗಳನ್ನು ನಿರ್ಗತಿಕರಿಗೆ ವಿತರಿಸಲಾಗಿದೆ. ತಮಿಳುನಾಡು ಪೊಲೀಸ್ ಇಲಾಖೆ ಸಹಾಯದಿಂದ ಸರ್ಕಾರೇತರ ಸಂಸ್ಥೆ(ಎನ್ಜಿಒ) ಗಳಿಗೆ ದಾನ ನೀಡುವ ನಮ್ಮ ಮಿಷನ್ನ ಗುರಿ ಸಫಲಗೊಂಡಿದೆ. ನಾವು ಸುಮಾರು 8,034 ಕಂಬಳಿಗಳನ್ನು ನಿರ್ಗತಿಕರಿಗೆ ದಾನ ನೀಡಿದ್ದೇವೆ ಎಂದು ಚೆನ್ನೈ ಮೂಲದ ಪ್ರಾಜೆಕ್ಟ್ ಸಂಯೋಜಕರಾದ ಸುಭಾಸಿನಿ ನಟರಾಜನ್ ಅವರು ತಮ್ಮ ಫೇಸ್ಬುಕ್ನಲ್ಲಿ ಪ್ರಕಟಿಸಿದ್ದಾರೆ.
ದಕ್ಷಿಣ ಆಫ್ರಿಕಾದ ತಂಡ 3,337 ಚದರ ಮೀಟರ್ ಅಳತೆಯ ಕಂಬಳಿ ನೇಯ್ದಿದ್ದು ಹಿಂದಿನ ದಾಖಲೆಯಾಗಿತ್ತು. ಮದರ್ ಇಂಡಿಯಾ ಕ್ರೋಷೆ ಕ್ವೀನ್ಸ್ ತಂಡ ಈ ದಾಖಲೆಯನ್ನು ಮುರಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.