ಶ್ರೀನಗರ: ಸಿಯಾಚಿನ್ ಗ್ಲಾಸಿಯರ್ನಲ್ಲಿ ಹಿಮಪಾತ ಸಂಭವಿಸಿದ ಕಾರಣ ಮಂಗಳವಾರ ರಾತ್ರಿಯಿಂದ ಭಾರತದ 10 ಮಂದಿ ಯೋಧರು ನಾಪತ್ತೆಯಾಗಿದ್ದಾರೆ.
19 ಸಾವಿರ ಅಡಿ ಎತ್ತರವಿರುವ ಈ ಪ್ರದೇಶದಲ್ಲಿ ಇದೀಗ ನಾಪತ್ತೆಯಾದ ಯೋಧರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಸೇನೆ ಮತ್ತು ವಾಯುಸೇನೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿವೆ.
೨೦೧೫ರ ನವೆಂಬರ್ನಲ್ಲೂ ಹಿಮಪಾತ ಸಂಭವಿಸಿ ಒರ್ವ ಆರ್ಮಿ ಕ್ಯಾಪ್ಟನ್ ಮೃತರಾಗಿದ್ದರು, 15 ಮಂದಿ ಯೋಧರನ್ನು ರಕ್ಷಿಸಲಾಗಿತ್ತು.
ಸಿಯಾಚಿನ್ ವಿಶ್ವದ ಅತೀ ಎತ್ತರದ ಯುದ್ಧಭೂಮಿಯಾಗಿದ್ದು, 5,700 ಮೀಟರ್ ಎತ್ತರದಲ್ಲಿದೆ. ಅತ್ಯಂತ ಕಡಿಮೆ ತಾಪಮಾನ ಇಲ್ಲಿದ್ದು, ಚಳಿಗಾಲದಲ್ಲಿ ಮೈನಸ್ 60 ಡಿಗ್ರಿ ಸೆಲ್ಸಿಯಸ್ಗೂ ಇಳಿಕೆಯಾಗುತ್ತದೆ. 1984ರಿಂದ ಭಾರತ ಮತ್ತು ಪಾಕಿಸ್ಥಾನ ತನ್ನ ಪಡೆಗಳನ್ನು ಇಲ್ಲಿ ನಿಯೋಜಿಸಿದ ಬಳಿಕ ಇಲ್ಲಿ ಸಾವಿರಾರು ಮಂದಿ ಮೃತರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.