ನವದೆಹಲಿ: ಈ ವರ್ಷ ಐಟಿ ಕಂಪನಿಗಳು ಮಹತ್ವದ ಬೆಳವಣಿಗೆಯನ್ನು ಕಾಣಲಿದ್ದು, ಎಲ್ಲಾ ಕಂಪನಿಗಳು ಡಿಜಟಲೀಕರಣದತ್ತ ಚಿತ್ತ ಹರಿಸಿವೆ ಮತ್ತು ಈ ವರ್ಷ 2.5 ಲಕ್ಷ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಲಾಗಿದೆ.
ಸ್ಟಾಫಿಂಗ್ ಸರ್ವಿಸ್ ಫರ್ಮ್ ಟೀಮ್ಲೀಸ್ ಸರ್ವೀಸಸ್ ಲಿಮಿಟೆಡ್ ಪ್ರಕಾರ, ಉದ್ಯಮದ ಗಮನ ಸರ್ವಿಸ್ ಪ್ರೊವೈಡರ್ನಿಂದ ಸೊಲ್ಯೂಷನ್ ಪ್ರೊವೈಡರ್ನತ್ತ ಹರಿದಿದೆ. ಇದರಿಂದ ಉದ್ಯಮಶೀಲತೆಯ ಚಟುವಟಿಕೆಗಳು ದ್ವಿಗುಣಗೊಂಡಿದೆ, ಇದು ಹೊಸ ನೇಮಕದಲ್ಲಿ ಐಟಿ ಕಂಪನಿಗಳು ಉತ್ತುಂಗಕ್ಕೆ ಏರುವುದನ್ನು ಉತ್ತೇಜಿಸಲಿದೆ.
ಕಳೆದ ವರ್ಷ ಐಟಿ ಕಂಪನಿಗಳ ನೇಮಕ ಶೇ.12ರಷ್ಟು ಹೆಚ್ಚಳವನ್ನು ಕಂಡಿದೆ. ಈ ವರ್ಷ ಅದು ಶೇ.14-16ರಷ್ಟು ಪ್ರಗತಿ ಕಾಣುವ ಸಾಧ್ಯತೆ ಇದೆ.
ಕಂಪನಿಗಳು ತಂತ್ರಜ್ಞಾನ ಮತ್ತು ಡಿಜಟಲೀಕರಣದತ್ತ ಹೆಚ್ಚು ಗಮನ ಹರಿಸಿವೆ, ಹೀಗಾಗಿ ಸ್ಕೇಲ್ಗಿಂತ ಬದಲು ಕೌಶಲ್ಯಕ್ಕೆ ಹೆಚ್ಚಿನ ಮನ್ನಣೆ ಕೊಡಲಿವೆ. ಇದು ಗೇಮ್ ಚೇಂಜರ್ ಆಗಲಿದೆ ಎಂದು ಟೀಮ್ಲೀಸ್ ಸರ್ವಿಸ್ ಮ್ಯಾನೇಜರ್ ಅಲ್ಕಾ ದಿಂಗ್ರಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.