ನವದೆಹಲಿ: ಕಾರು ತಯಾರಕರು ಮುಂದಿನ ಕೆಲವು ತಿಂಗಳಿನಲ್ಲಿ ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಹದಗೆಟ್ಟಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರ ಪ್ರೋತ್ಸಾಹಿಸುತ್ತಿದ್ದು, ಇಂಧನ ಸಮರ್ಥ ಕಾರುಗಳ ಬದಲು ವಿದ್ಯುತ್ ಚಾಲಿತ ಕಾರುಗಳೆಡೆಗೆ ಆಕರ್ಷಿಸುತ್ತಿದೆ.
ವಾಯು ಮಾಲಿನ್ಯದಿಂದ ಕೂಡಿದ ನವದೆಹಲಿಯಲ್ಲಿ ಬುಧವಾರ ಕಾರು ತಯಾರಕರು ಭಾರತದ ಬೃಹತ್ ಮೋಟಾರ್ ಪ್ರದರ್ಶನವನ್ನು ಆರಂಭಿಸಲಿದ್ದಾರೆ. ಹೊಸದಾಗಿ ವಿನ್ಯಾಸಗೊಳಿಸಲಾದ ಹಸಿರು ಕಾರುಗಳ ಕಡೆಗೆ ಸಂಭಾವ್ಯ ಖರೀದಿದಾರರನ್ನು ಸೆಳೆಯುವ ನಿಟ್ಟಿನಲ್ಲಿ ಟೊಯೋಟಾ ಮೋಟಾರ್ ಕಾರ್ಪ್ ಮುಂತಾದ ವಿದೇಶಿ ಸಂಸ್ಥೆಗಳು ದೇಶೀಯ ಸಂಸ್ಥೆಗಳಾದ ಟಾಟಾ ಮೋಟಾರ್ಸ್, ಮಹೀಂದ್ರಾ & ಮಹೀಂದ್ರಾ ಜೊತೆ ಸೇರಿಕೊಳ್ಳಲಿದೆ.
ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಕಾರು ಮಾರುಕಟ್ಟೆಗಳ ಪಾಲು ಹೆಚ್ಚು. ಸರ್ಕಾರದ ರೂ.೨೦೦೦ ಮೌಲ್ಯದ ನೆರವಿನೊಂದಿಗೆ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳು ಮಾರಾಟ ಅತ್ಯಲ್ಪ ಮಟ್ಟದಲ್ಲಿ ಹೆಚ್ಚಲಿದ್ದು, 2020ರ ಒಳಗಾಗಿ 5 ಮಿಲಿಯನ್ ಕಾರುಗಳ ಮೂರನೇ ಒಂದಂಶ ತಲುಪಲಿದೆ ಎಂದು ಐಎಚ್ಎಸ್ ಅಟೊಮೊಬೈಲ್ ಹೇಳಿದೆ.
ಭಾರತದಲ್ಲಿ ಹೊಸ ತಂತ್ರಜ್ಞಾನ ರೂಪಿಸುವುದು ಮಾತ್ರವಲ್ಲ ಮಾರುಕಟ್ಟೆ ಮತ್ತು ಖರೀದಿದಾರರಿಗೆ ಇದು ತಲುಪುವಂತಾಗಬೇಕು ಎಂದು ಮಾರುತಿ ಸುಝುಕಿ ಸಂಸ್ಥೆಯ ಹಿರಿಯ ಎಂಜಿನಿಯರ್ ಸಿವಿ. ರಾಮನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.