ನವದೆಹಲಿ: ಫೆ.5ರಿಂದ ಆರಂಭವಾಗುತ್ತಿರುವ ಕರಾಚಿ ಲಿಟರೇಚರ್ ಫೆಸ್ಟಿವಲ್ನಲ್ಲಿ ಭಾಗವಹಿಸಬೇಕಿದ್ದ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಪಾಕಿಸ್ಥಾನ ಸರ್ಕಾರ ವೀಸಾ ನಿರಾಕರಿಸಿದೆ.
ಪಾಕಿಸ್ಥಾನದ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇರ್, ವೀಸಾಗೆ ಅರ್ಜಿ ಸಲ್ಲಿಸಿದ 18ಮಂದಿಯಲ್ಲಿ 17 ಮಂದಿಗೆ ವೀಸಾ ಬಂದಿದೆ, ಆದರೆ ನನಗೆ ಮಾತ್ರ ವೀಸಾ ನಿರಾಕರಿಸಲಾಗಿದೆ ಎಂದು ದೂರಿದ್ದಾರೆ.
‘ಪಾಕ್ ಕಲಾವಿದರನ್ನು ನಾವು ಭಾರತದಲ್ಲಿ ಸ್ವಾಗತಿಸುತ್ತೇವೆ. ಒಂದು ಕಡೆ ಅವರ ಕಾರ್ಯಕ್ರಮಕ್ಕೆ ತಡೆ ಬಂದರೆ, ಇನ್ನೊಂದೆಡೆ ಅವರಿಗೆ ಸ್ವಾಗತ ಕೋರಲಾಗುತ್ತದೆ. ಆದರೆ ಪಾಕ್ ಈ ರೀತಿ ವರ್ತಿಸುತ್ತಿಲ್ಲ’ ಎಂದಿದ್ದಾರೆ.
ನಾನೂ ಕಾಶ್ಮೀರಿ ಪಂಡಿತ ಎಂಬ ಕಾರಣಕ್ಕೆ ಅಥವಾ ಅಸಹಿಷ್ಣುತೆ ಬಗ್ಗೆ ನನ್ನ ನಿಲುವಿಗೆ ಪಾಕಿಸ್ಥಾನ ಈ ರೀತಿಯಾಗಿ ನಡೆದುಕೊಂಡಿರಬಹುದು ಎಂದಿದ್ದಾರೆ.
ಆದರೆ ಪಾಕ್ ಅಧಿಕಾರಿಗಳು ಮಾತ್ರ ಖೇರ್ ಅವರಿಂದ ವೀಸಾಗೆ ಅರ್ಜಿ ಬಂದಿಲ್ಲ ಎಂದು ಹೇಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.