ಮನ್ಸಾ: ಹೆಣ್ಣು ಮಕ್ಕಳನ್ನು ಉತ್ತೇಜಿಸುವ, ಅವರ ಪೋಷಕರನ್ನು ಪ್ರೋತ್ಸಾಹಿಸುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ ಕೊನೆಗೊಳ್ಳಲಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಲಿ ಎಂಬ ಆಶಯದೊಂದಿಗೆ ಸರ್ಕಾರಗಳೂ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ.
ಕೇಂದ್ರದ ’ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯಡಿ ಪಂಜಾಬ್ನ ಮಾನ್ಸಾ ಜಿಲ್ಲಾಡಳಿತ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದೇನೆಂದರೆ ಒಂದು ಅಥವಾ ಎರಡು ಹೆಣ್ಣು ಮಕ್ಕಳನ್ನು ಹೊಂದಿರುವ ಪೋಷಕರನ್ನು ಸನ್ಮಾನಿಸುವ ಕಾರ್ಯ.
ಮೊದಲ ಮಗು ಅಥವಾ ಎರಡೂ ಮಗು ಹೆಣ್ಣಾದರೂ ಗಂಡು ಮಗುವಿನ ಆಸೆಗೆ ಮೂರನೇ ಮಗು ಮಾಡಿಕೊಳ್ಳದ ದಂಪತಿಗಳಿಗೆ ’ಸಮ್ಮಾನ್ ಪತ್ರ’ ಮತ್ತು ಒಂದು ಬಾಕ್ಸ್ ಲಡ್ಡನ್ನು ನೀಡಲಾಗುತ್ತಿದೆ. ಸಮ್ಮಾನ್ ಪತ್ರ ಜಿಲ್ಲಾಧಿಕಾರಿಯವರ ಸಹಿಯನ್ನು ಹೊಂದಿರುತ್ತದೆ. ಅಲ್ಲದೇ ಹೆಣ್ಣು ಮಗು ಪಡೆದಿದಕ್ಕೆ ಹೆಮ್ಮೆ ಇದೆ ಎಂದು ಹಿಂದಿಯಲ್ಲಿ ಬರೆಯಲಾಗಿದೆ.
ಈ ಪತ್ರದಲ್ಲಿ ‘ಹೆಣ್ಣುಮಕ್ಕಳು ನಮ್ಮ ಹೆಮ್ಮೆ. ನಿಮ್ಮ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನದ ಸುದ್ದಿ ಕೇಳಿ ನಾವು ಅತೀವ ಸಂತೋಷಪಟ್ಟೆವು. ಹೆಣ್ಣುಮಕ್ಕಳು ಪ್ರಕೃತಿಯ ಕೊಡುಗೆ. ಮಾನವೀಯತೆಯನ್ನು ಮುಂದಕ್ಕೆ ಕೊಂಡೊಯ್ಯಲು ದೇವರು ನೀಡಿರುವ ಭರವಸೆ. ನಿಮ್ಮ ಕುಟುಂಬದ ಘನತೆಯನ್ನೂ ಇವರು ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಸರ್ಕಾರ ನಿಮ್ಮ ಮಗಳ ಆರೋಗ್ಯ, ವಿದ್ಯಾಭ್ಯಾಸ, ರಕ್ಷಣೆಯ ಭರವಸೆಯನ್ನು ನೀಡುತ್ತದೆ.
ಅವಳ ಆರೋಗ್ಯಪೂರ್ಣ ಜೀವನವನ್ನು ನಾವು ಆಶಿಸುತ್ತೇವೆ. ಗಂಡು ಮಕ್ಕಳು ಹೆತ್ತವರನ್ನು ಸ್ವರ್ಗಕ್ಕೆ ಕಳುಹಿಸಬಹುದು ಆದರೆ ಹೆಣ್ಣುಮಕ್ಕಳು ಮನೆಗೆಯೇ ಸ್ವರ್ಗವನ್ನು ತರುತ್ತಾರೆ’ ಎಂದು ಬರೆಯಲಾಗಿದೆ.
ಮೂರು ಹೆಣ್ಣುಮಕ್ಕಳು ಅಥವಾ ಗಂಡು ಮಗು ಹೊಂದಿರುವ ದಂಪತಿಗಳನ್ನು ಈ ಕಾರ್ಯಕ್ರಮದಿಂದ ಜಿಲ್ಲಾಡಳಿತ ದೂರವಿರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.