ಜೊಹಾನ್ಸ್ಬರ್ಗ್: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪ್ರಮುಖ್ ಸ್ವಾಮಿ ಮಹಾರಾಜ್ ಜೊತೆಗಿನ ತಮ್ಮ ಧಾರ್ಮಿಕ ಅನುಭವಗಳ ಪುಸ್ತಕ ‘Transendence’ ನ್ನು ವಿವಿಧ ದಾರ್ಮಿಕ ಮುಖಂಡರು, ರಾಜಕಾರಣಿಗಳು, ರಾಜತಾಂತ್ರಿಕರು, ಉದ್ಯಮಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ.
ಬೊಶಾಸನವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್) ಇದರ ಮುಖಂಡರಾದ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜೊತೆಗಿನ ಅನುಭವವನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಈ ಇಬ್ಬರು ನಾಯಕರ ಸಲಹೆ-ಸೂಚನೆಗಳು, ಬುದ್ಧಿಮತ್ತೆಯನ್ನು ಹಲವು ಭಾಷಣಕಾರರು ಶ್ಲಾಘಿಸಿದ್ದು, ಇದರಿಂದ ಬಹಳಷ್ಟು ಲಾಭ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ನಾಯಕರು ಹಾಗೂ ನಾಗರಿಕರು ದೇಶ ಎದುರಿಸುತ್ತಿರುವ ಸಾಮಾಜಿಕ ಬಿಕ್ಕಟ್ಟು, ಬ್ರಷ್ಟಾಚಾರ, ಬಡತನ ಮತ್ತು ನಿರುದ್ಯೋಗ ಸಮಸ್ಯೆ ಬಗೆಹರಿಸಲು ಈ ಪುಸ್ತಕದಿಂದ ಕಲಿತ ಪಾಠಗಳನ್ನು ಬಳಸಬಹುದು ಎಂದು ಪ್ರಾಂತೀಯ ಸಾರಿಗೆ ಸಚಿವ ಇಸ್ಮಾಯಿಲ್ ವಾದಿ ತಿಳಿಸಿದ್ದಾರೆ.
ಧಾರ್ಮಿಕ ಮುಖಂಡರಾಗಿರುವ ಪ್ರಮುಖ್ ಸ್ವಾಮಿ ಮಹಾರಾಜ್ ಹಾಗೂ ಶ್ರೇಷ್ಠ ವಿಜ್ಞಾನಿ ಕಲಾಂ ಅವರ ನಡುವಿನ ಸ್ನೇಹವು ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಭೇದ ಭಾವವನ್ನು ಮೀರಿ ವಿಶ್ವವನ್ನು ಮುನ್ನಡೆಸಬಹುದು ಎಂದು ತೋರಿಸಿದೆ ಎಂದು ಪುಸ್ತಕ ರಚನೆಯ ಸಹ ರಚನಕಾರ ಪ್ರೊ. ಅರುಣ್ ತಿವಾರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.