ನ್ಯೂಯಾರ್ಕ್: ಸರ್ಚ್ ಇಂಜಿನ್ ದೈತ್ಯ ಗೂಗಲ್, ಒಂದು ನಿಮಿಗಳ ಕಾಲ ಗೂಗಲ್.ಕಾಂ ಒಡೆಯನಾದ ಸನ್ಮಯ್ ವೇದ್ಗೆ 6,006.6 ಡಾಲರ್ (4.07 ಲಕ್ಷ) ಹಣ ಪಾವತಿಸಿದೆ. ಈ ಹಣವನ್ನು ಚಾರಿಟಿಗೆ ದಾನ ಮಾಡಿದ ಸನ್ಮಯ್ಗೆ ಗೂಗಲ್ ತಾನು ನೀಡಿದ ಹಣವನ್ನು ದುಪ್ಪಟ್ಟು ಮಾಡಿ 8 ಲಕ್ಷ ಪಾವತಿಸಿದೆ.
ಕಳೆದ ಸೆಪ್ಟೆಂಬರ್ನಲ್ಲಿ ಮಾಜಿ ಗೂಗಲ್ ಒಡೆಯ ಗೂಗಲ್ ಡೊಮೇನ್ ಹುಡುಕಾಟದ ಸಂದರ್ಭ ಗೂಗಲ್.ಕಾಂ(ಡೊಮೇನ್) ಮಾರಾಟಕ್ಕೆ ಲಭ್ಯವಿರುವುದು ತಿಳಿದು ಬಂದಿದ್ದು, ಆತ 12 ಡಾಲರ್ಗೆ ಡೊಮೇನ್ ಖರೀದಿಸಿದ್ದಾನೆ. ಗೂಗಲ್ ತನ್ನ ಡೊಮೇನ್ ವಾಪಸ್ ಪಡೆಯುವುದಕ್ಕೆ ಸನ್ಮಯ್ಗೆ 8 ಲಕ್ಷ ನೀಡಿದೆ.
ಕಚ್ನ ಮಾಂಡ್ವಿ ಪ್ರದೇಶದ ನಿವಾಸಿ ಸನ್ಮಯ್ಗೆ ಗೂಗಲ್ 4.07 ಲಕ್ಷ ರೂ. ಹಣ ಪಾವತಿಸಿದ್ದು, ಇದನ್ನು ಅವರು ಆರ್ಟ್ ಆಫ್ ಲಿವಿಂಗ್ ಇಂಡಿಯಾ ಫೌಂಡೇಷನ್ಗೆ ದಾನ ನೀಡಿದ್ದಾರೆ. ಈ ವಿಚಾರದಿಂದಾಗಿ ಗೂಗಲ್ ತನ್ನ ಪಾವತಿಯನ್ನು ದುಪ್ಪಟ್ಟುಗೊಳಿಸಿ 8 ಲಕ್ಷಕ್ಕೆ ಏರಿಸಿದೆ.
ಭಾರತದ 18 ರಾಜ್ಯಗಳ ಬಡತನ, ಸ್ಲಮ್ ಪ್ರದೇಶ, ಬಾಲಕಾರ್ಮಿಕರು ಮತ್ತು ಬಡತನದಿಂದ ಕೂಡಿದ ಗ್ರಾಮೀಣ ಪ್ರದೇಶದ 39,200 ಮಕ್ಕಳಿಗೆ ಆರ್ಟ್ ಆಫ್ ಲಿವಿಂಗ್ನ ಶಿಕ್ಷಣ ಸಂಸ್ಥೆಯು ತನ್ನ 404 ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ.
ಭಾರತ, ಬ್ರಿಟನ್, ರಷ್ಯಾ, ಪೋಲ್ಯಾಂಡ್, ಗರ್ಮನಿ, ರೋಮೆನಿಯಾ, ಇಸ್ರೇಲ್, ಬ್ರೆಜಿಲ್ ಮುಂತಾದ ರಾಷ್ಟ್ರಗಳ ಅಧ್ಯಯನಕಾರರು ಇದರ ಭದ್ರತಾ ಬಹುಮಾನ ಕಾಯರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದುಗೂಗಲ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.