ನವದೆಹಲಿ: ದೆಹಲಿಯಲ್ಲಿ ಹೆಚ್ಚಿದ ಕಸದ ರಾಶಿಯನ್ನು ಆಮ್ ಆದ್ಮಿ ಪಕ್ಷದ ಸಚಿವರು ಹಾಗೂ ಅನೇಕ ಕಾರ್ಯಕರ್ತರು ಸೇರಿ ಸ್ವಚ್ಛಗೊಳಿಸಿದ್ದಾರೆ.
ದೆಹಲಿ ಮಹಾನಗರ ಪಾಲಿಕೆಯ ಸುಮಾರು 60 ಸಾವಿರ ಸ್ವಚ್ಛತಾ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಕಳೆದ ಬುಧವಾರದಿಂದ ನಡೆಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ವೇತನ ಪಾವತಿ ಹಾಗೂ ಬಾಕಿ ಸಂಬಳವನ್ನು ಶೀಘ್ರವೇ ನೀಡಬೇಕು ಎಂದು ಆಗ್ರಹಿಸಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ದೆಹಲಿಯಾದ್ಯಂತ ಮುಷ್ಕರದ ಪರಿಣಾಮದಿಂದಾಗಿ ಕಸದ ರಾಶಿ ಹೆಚ್ಚುತ್ತಿದ್ದು, ಕಸದ ವಿಲೇವಾರಿ ಕಷ್ಟಸಾಧ್ಯವಾಗಿತ್ತು. ಇದಕ್ಕಾಗಿ ಸಚಿವರು, ಕಾರ್ಯಕರ್ತರು ಮುಂದಾಗಿ ಕಸ ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕಪಿಲ್ ಮಿಶ್ರಾ, ಸತ್ಯೇಂದ್ರ ಜೈನ್, ರಾಮನಿವಾಸ್ ಗೋಯೆಲ್, ಪಕ್ಷದ ಶಾಸಕರು, ಕಾರ್ಯಕರ್ತರು ಜೊತೆಗೂಡಿ ಸ್ವಚ್ಛತಾ ಕಾರ್ಯ ನಡೆಸಿದರು. ದೆಹಲಿ ಸರ್ಕಾರ ಕಸವನ್ನು ವಿಲೇವಾರಿ ಮಾಡಲು ಲೋಕೋಪಯೋಗಿ ಇಲಾಖೆಯ ಕಾರ್ಯಪಡೆಯನ್ನು ನಿಯೋಜಿಸಿದ್ದು, ಜಲ ಮಂಡಳಿಯ ನೌಕರರೂ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
ಈ ಕಾರ್ಯವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರವರು ಶ್ಲಾಘಿಸಿದ್ದು, ನೌಕರರ ಬೇಡಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಇದಕ್ಕೊಂದು ಪರಿಹಾರ ಸದ್ಯದಲ್ಲೇ ಲಭಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ನಗರಪಾಲಿಕೆ ನೌಕರರು ಮಾತ್ರ ಯಾವುದಕ್ಕೂ ಕಿವಿಗೊಡದೆ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.