ಅಹ್ಮದಾಬಾದ್: ಭಾರತದ ಮೊದಲ ಅಂಡರ್ವಾಟರ್ ರೆಸ್ಟೋರೆಂಟ್ ಅಹ್ಮಾದಾಬಾದ್ನಲ್ಲಿ ಆರಂಭಿಸಲಾಗಿದ್ದು, ಆಹಾರ ಪ್ರಿಯರಿಗೆ ಇದು ಒಂದು ಹೊಸ ಅನುಭವವನ್ನೇ ನೀಡಲಿದೆ. ’ದ ರಿಯಲ್ ಪೋಸಿಡಾನ್’ ಎಂಬ ಹೆಸರಿನ ಈ ರೆಸ್ಟೋರೆಂಟ್ ಒಂದು ವಿಸ್ತಾರವಾದ ಡೈನಿಂಗ್ ಹಾಲ್ ಹೊಂದಿದ್ದು, ಇದು ನೆಲದ ಮಟ್ಟದಿಂದ 20 ಅಡಿ ಆಳದಲ್ಲಿ ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಹ್ಮದಾಬಾದ್ ಮೂಲದ ಉದ್ಯಮಿ ಭರತ್ ಭಟ್ ನಡೆಸುತ್ತಿರುವ ಈ ರೆಸ್ಟೋರೆಂಟ್ 32 ಆಸನಗಳನ್ನು ಹೊಂದಿದೆ. ಥಾಯ್, ಮೆಕ್ಸಿಕನ್ ಹಾಗೂ ಭಾರತೀಯ ಆಹಾರ, ತಿಂಡಿ-ತಿನಿಸುಗಳನ್ನು ಒದಗಿಸುತ್ತಿರುವ ಈ ರೆಸ್ಟೋರೆಂಟ್ನಲ್ಲಿ ಸಸ್ಯಾಹಾರಿ ಆಹಾರಗಳು ಮಾತ್ರ ಲಭ್ಯವಿವೆ ಎನ್ನಲಾಗಿದೆ.
ನೆಲ ಮಟ್ಟದಿಂದ 20 ಅಡಿ ಆಳದಲ್ಲಿ ಇರುವ ಈ ರೆಸ್ಟೋರೆಂಟ್, 1,60,000 ಲೀಟರ್ ನೀರು ಹೊಂದಿದ ಅಕ್ವೇರಿಯಂನಿಂದ ಸುತ್ತುವರಿದಿದೆ. ಈ ಅಕ್ವೇರಿಯಂನಲ್ಲಿ 4000 ವಿವಿಧ ಜಾತಿಯ ಮೀನುಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.