ಯುಎಇ: ಭಾರತ ಮತ್ತಿತರ ದೇಶಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಭಾರತೀಯ ಮೂಲದ ೩ ಶಂಕಿತ ಇಸಿಸ್ ಉಗ್ರರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಗಡಿಪಾರು ಮಾಡಲಾಗಿದೆ.
ಅದ್ನಾನ್ ಹುಸೇನ್, ಮಹಮ್ಮದ್ ಫರ್ಹಾನ್, ಶೇಖ್ ಅಜರ್ ಅಲ್ ಇಸ್ಲಾಂ ಎಂಬ ಮೂವರು ಶಂಕಿತರನ್ನು ಗಡೀಪಾರು ಮಾಡಲಾಗಿದ್ದು, ಐಜಿಐ ವಿಮಾನ ನಿಲ್ದಾಣದಲ್ಲಿ ಎನ್ಐಎ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂವರು ಜಮ್ಮು-ಕಾಶ್ಮೀರ, ಮಹಾರಾಷ್ಟ್ರ ಹಾಗೂ ಕರ್ನಾಟಕದವರೆಂದು ಹೇಳಲಾಗಿದ್ದು, ಭಯೋತ್ಪಾದನೆ ದಾಳಿ, ದಾಳಿಗೆ ಪ್ರೇರೇಪಿಸುವ, ಗುರುತಿಸುವಿಕೆ ಮತ್ತು ತರಬೇತಿ ಪಿತೂರಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಮೂವರು ಅಬು ಧಾಬಿಯ ಇಸಿಸ್ ಘಟಕದ ಸದಸ್ಯರು ಎಂದು ಹೇಳಲಾಗಿದೆ.
ಎನ್ಐಎ ಇವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಶೀಘ್ರವೇ ವಿಚಾರಣೆ ನಡೆಸಲಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ ೫, ೨೦೧೫ರಂದು ಯುಎಇಯಿಂದ 4 ಶಂಕಿತ ಭಾರತೀಯರನ್ನು ಗಡಿಪಾರು ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.