ಬೆಂಗಳೂರು : ಬಿಎಸ್ಎನ್ಎಲ್ ಲಾಭಗಳಿಸುವ ತನಕ ನಮ್ಮ ಸಿಬ್ಬಂದಿಗೆ ವೇತನ ಹೆಚ್ಚಳವನ್ನು ಮಾಡಲಾಗುದಿಲ್ಲ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿ ಮೊಬೈಲ್ ಡಾಟಾ ಆಫ್ಲೋಡ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ ಏರ್ ಇಂಡಿಯಾ ಮತ್ತು ಐಟಿಐಗಳು ತಮ್ಮ ಸಂಬಳವನ್ನು ಹೆಚ್ಚಿಸಿರಲಿಲ್ಲ. ಈ ವರ್ಷ ನಮ್ಮ ಸಂಸ್ಥೆ ಲಾಭದತ್ತ ನಡೆಯುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.
2002 ರಿಂದ 2006 ರವರೆಗೆ ಮೊಬೈಲ್ ಆಪರೇಟಿಂಗ್ನಲ್ಲಿ ಬಿಎಸ್ಎನ್ಎಲ್ ಅಗ್ರ ಸ್ಥಾನದಲ್ಲಿತ್ತು. ನಂತರದ ದಿನಗಳಲ್ಲಿ ಪ್ರಗತಿಯು ಇಳಿಮುಖವಾಗುತ್ತಾ ಬಂತು. 2014-15ನೇ ಸಾಲಿನಲ್ಲಿ 672 ಕೋಟಿ ರೂ. ಲಾಭ ಗಳಿಸಿದ. ಆದರೆ ಈ ಹಿಂದೆ 691 ಕೋಟಿ ರೂ. ನಷ್ಟ ಅನುಭವಿಸಿತ್ತು ಎರಡು-ಮೂರು ವರ್ಷಗಳಲ್ಲಿ ಬಿಎಸ್ಎನ್ಎಲ್ ಲಾಭ ಹೊಂದುವಂತಾಗಬೇಕು.
ಈ ಹಿಂದೆ ಅಧಿಕಾರಿಗಳು ಕೇವಲ ಕಡತಗಳಗೆ ಸಹಹಾಕುವುದೇ ನಮ್ಮ ಕೆಲಸವೆಂದು ತಿಳಿದಿದ್ದರು ಆದರೆ ಈಗ ನಮ್ಮ ಗುರಿ ಉತ್ತಮ ಆದಾಯಗಳಿಸುದಾಗಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಲ್ಲಿ ಅಧಿಕಾರಿಗಳ ಸೂಚಿಸಲಾಗಿದೆ ಎಂದರು.
ನೆರೆಯ ರಾಜ್ಯಗಳಿಗೆ ಹೋಲಿಸಿದಾಗ ಲಾಭಾಂಶ ಪಡೆವಲ್ಲಿ ಕರ್ನಾಟಕ ಕೊಂಚ ಹಿಂದಿದೆ. ಬಿಎಸ್ಎನ್ಎಲ್ ಲಾಭಗಳಿಸುವ ತನಕ ವೇತನ ಹಚ್ಚುಮಾಡದಂತೆ ಆತಂರಿಕ ಆರ್ಥಿಕ ಸಲಹೆಗಾರರಿಗೆ ತಿಳಿಸಲಾಗಿದೆ ಎಂದು ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.