ಮಣಿಪುರ : ಇಂಫಾಲದಲ್ಲಿ 22 ರ ಯುವಕನೊಬ್ಬನನ್ನು ಉಗ್ರಗಾಮಿ ಎಂದು ಶಂಕಿಸಿ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. ಆತ ನಿರಾಯುಧನಾಗಿದ್ದ ಮತ್ತು ಅವನನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದು ನಾನೇ ಎಂದು ಪೊಲೀಸ್ ಸಿಬ್ಬಂದಿ ಆರು ವರ್ಷಗಳ ಬಳಿಕ ಇದೀಗ ತಪ್ಪೊಪ್ಪಿಕೊಂಡಿದ್ದಾನೆ.
ಚುಂಗ್ಖಾಮ್ ಸಂಜಿತ್ ಮೀತಿಯನ್ನು ಪೀಪಲ್ಸ್ ಲಿಬರೇಷನ್ ಆರ್ಮಿಯ ಸದಸ್ಯ ಎಂದು ಶಂಕಿಸಲಾಗಿದ್ದು, ಅವನನ್ನು 2009 ರಲ್ಲಿ ಇಂಫಾಲದಲ್ಲಿ ಎನೌಕಂಟರ್ ಮಾಡಲಾಗಿತ್ತು. ಆದರೆ ಸಂಜಿತ್ ಮೀತಿ ಆಸ್ಪತ್ರೆಯಲ್ಲಿ ಅಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸಂಜಿತ್ನನ್ನು ನಕಲಿ ಎನ್ಕೌಂಟರ್ನಲ್ಲಿ ಹತೈಗೈದಿದ್ದ ಹೆಡ್ ಕಾನ್ಸ್ಟೇಬಲ್ ಥೌನಾಮ್ಜಾಮ್ ಹಿರೋಜಿತ್ ಸಿಂಗ್, ಹಿರಿಯ ಅಧಿಕಾರಿಯೊಬ್ಬರ ಆದೇಶದ ಮೇರೆಗೆ ನಾನು ಈ ರೀತಿ ಎನ್ಕೌಂಟರ್ ಮಾಡಿದೆ ಎಂದು ಹೇಳಿದ್ದಾನೆ.
ಸಂಜಿತ್ ಮೀತಿಯನ್ನು ಹತ್ಯೆಗೈದಾಗ ನನಗೆ ಯಾವುದೇ ಪಶ್ಚಾತ್ತಾಪವಾಗಿರಲಿಲ್ಲ. ಆದರೆ ಈಗ ನನಗೆ ಜೀವಭೀತಿಯಿದೆ ಹಾಗಾಗಿ ನಾನು ತಪ್ಪನ್ನೊಪ್ಪಿಕೊಳ್ಳುತ್ತಿದ್ದೇನೆ ಎಂದು ಹೇಳಿರುವುದನ್ನು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಕೇರಳ ಪ್ರವಾಸದಲ್ಲಿರುವ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.