ಡೆಹ್ರಾಡೂನ್: ಓವರ್ವೇಟ್ ಇರುವ ಪೊಲೀಸ್ ಕಾನ್ಸ್ಸ್ಟೇಬಲ್ಸ್ಗಳನ್ನು ಪತ್ತೆ ಮಾಡುವುದಕ್ಕಾಗಿ ಉತ್ತರಾಖಂಡದಲ್ಲಿ ನಡೆಸಲಾದ ಪರೀಕ್ಷೆ ಅತೀ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.
ಉತ್ತರಾಖಂಡದ ಉಧಮ್ಪುರ ಜಿಲ್ಲೆಯಲ್ಲಿ ಅಧಿಕ ತೂಕವಿರುವ ಕಾನ್ಸ್ಸ್ಟೇಬಲ್ಗಳ ಫಿಟ್ನೆಸ್ ಪರೀಕ್ಷೆ ನಡೆಸಲಾಯಿತು. ಕೆಲವೊಂದು ದೈಹಿಕ ಪರೀಕ್ಷೆಗಳನ್ನು ಇವರಿಗೆ ಏರ್ಪಡಿಸಲಾಗಿತ್ತು. ಆದರೆ ಒಬ್ಬ ಕಾನ್ಸ್ಸ್ಟೇಬಲ್ಗೆ ಹಿರಿಯ ಅಧಿಕಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಒಂದು ರೌಂಡ್ ಹೊಡೆಯುವಂತೆ ಸೂಚಿಸಲಾಗಿದೆ.
ಫಿಟ್ನೆಸ್ ಪರೀಕ್ಷೆಗಾಗಿ ಹಿರಿಯ ಅಧಿಕಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಔಚಿತ್ಯವೇನು ಎಂಬುದನ್ನು ಹಲವಾರು ಮಂಡಿ ಪ್ರಶ್ನಿಸಿದ್ದಾರೆ. ಈ ವರ್ತನೆಗೆ ಖಂಡನೆಗಳೂ ವ್ಯಕ್ತವಾಗಿದೆ.
ಕಾನ್ಸ್ಸ್ಟೇಬಲ್ಗಳು ಪೊಲೀಸ್ ಇಲಾಖೆಯ ಬೆನ್ನೆಲುಬುಗಳು, ಅವರನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಉತ್ತರಾಖಂಡ ಡಿಜಿಪಿ ಬಿಎಸ್ ಸಿಧು ತಿಳಿಸಿದ್ದಾರೆ. ಈ ಬಗ್ಗೆ ತನಿಖೆಗೂ ಆದೇಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.