ನವದೆಹಲಿ: 3 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಪ್ರಾನ್ಸಿಸ್ಕೋ ಹೋಲ್ಯಾಂಡ್ ಅವರು 16 MoUs ಸಹಿ ಹಾಕಿದ್ದಾರೆ, ಇದೀಗ ಎಲ್ಲರ ಕಣ್ಣು ರಫೆಲ್ ಒಪ್ಪಂದದತ್ತ ನೆಟ್ಟಿದೆ.
ಭಯೋತ್ಪಾದನೆಯ ಬಗ್ಗೆಯೂ ಉಭಯ ದೇಶಗಳು ಕಟುವಾಗಿ ಪ್ರತಿಕ್ರಿಯೆ ನೀಡಿದ್ದು, ಇಸಿಸ್ ಬೆದರಿಕೆಗೆ ಪ್ರಾನ್ಸ್ ಬಗ್ಗುವುದಿಲ್ಲ, ಅವರನ್ನು ನಿರ್ಮೂಲನೆ ಮಾಡಲು ಸರ್ವ ಪ್ರಯತ್ನವನ್ನು ಮಾಡುತ್ತೇವೆ ಎಂದಿದ್ದಾರೆ.
ರಾಷ್ಟ್ರಪತಿಭವನದಲ್ಲಿ ಮಾತನಾಡಿದ ಅವರು, ’ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವುದು ಗೌರವ ತಂದಿದೆ. ಭಯೋತ್ಪಾದನೆಯ ವಿರುದ್ಧ ಭಾರತ-ಫ್ರೆಂಚ್ ಸಹಕಾರವನ್ನು ಗಟ್ಟಿಗೊಳಿಸುವುದು ನಮ್ಮ ಪ್ರಾಮುಖ್ಯತೆ. ಆರ್ಥಿಕ ಸಂಬಂಧ, ಕೃಷಿ ಮತ್ತು ಬಾಹ್ಯಾಕಾಶದಲ್ಲಿ ಪರಸ್ಪರ ಸಹಕರಿಸುವುದು ಅತಿ ಮುಖ್ಯ. ಸಿಓಪಿ-21ನ ಯಶಸ್ಸಿನಲ್ಲಿ ಮೋದಿ ಮಹತ್ವದ ಪಾತ್ರ ವಹಿಸಿದ್ದಾರೆ’ ಎಂದು ಹೋಲ್ಯಾಂಡ್ ಹೇಳಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಹೋಲ್ಯಾಂಡ್ ಅವರಿಗೆ ವಿದ್ಯುಕ್ತ ಸ್ವಾಗತವನ್ನು ಕೋರಲಾಯಿತು. ಈ ವೇಳೆ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಉಪಸ್ಥಿತರಿದ್ದರು.
ರಫೆಲ್ ಒಪ್ಪಂದ ಮಾತುಕತೆಯ ಹಂತದಲ್ಲಿದೆ, ಉಭಯ ಸರ್ಕಾರಗಳು ಸಮ್ಮತಿಸಿದ ಬಳಿಕವೇ ಸಹಿ ಬೀಳಲಿದೆ. ಪ್ಯಾರೀಸ್ಗೆ ಬಂದಾಗ ಮೋದಿ 36 ರಫೆಲ್ ಏರ್ಕ್ರಾಫ್ಟ್ಗಳ ಖರೀದಿ ಬಗ್ಗೆ ಘೋಷಿಸಿದ್ದರು. ಆ ಬಗ್ಗೆ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.