ಚೆನ್ನೈ: ಭಾರತ ಮೂಲದ ಅಮೇರಿಕನ್ ತಂತ್ರಜ್ಞ ಕೊಟ್ಟಲ್ಯಾಂಗೊ ಲಿಯೋನ್ ಅವರ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಧನೆಗಾಗಿ ಈ ವರ್ಷದ ಆಸ್ಕರ್ಗೆ ಆಯ್ಕೆ ಮಾಡಲಾಗಿದೆ.
44 ವರ್ಷದ ತಂತ್ರಜ್ಞ ಕೊಟ್ಟಲ್ಯಾಂಗೊ ತಮ್ಮ ಸೋನಿ ಪಿಕ್ಚರ್ಸ್ ಇಮೇಜ್ವರ್ಕ್ಸ್ನ ವಿನ್ಯಾಸ, ಇಂಜಿನಿಯರಿಂಗ್ ಮತ್ತು ನಿರಂತರ ಅಭಿವೃದ್ಧಿಗಾಗಿ ’ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನೆಗಳು’ ವರ್ಗದ ಅಡಿಯಲ್ಲಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅಕಾಡೆಮಿಯು ಕೊಟ್ಟಲ್ಯಾಂಗೊ ಮತ್ತು ಅವರ ತಂಡ ಅಭಿವೃದ್ಧಿಪಡಿಸಿದ ಸೋನಿ ಉಪಕರಣವನ್ನು ಗುರುತಿಸಿದೆ. ಸೋನಿಯ ಈ ಉಪಕರಣ ’ಐಟಿವ್ಯೂ’ (itview) ಸಾಫ್ಟವೇರ್ ಚಿತ್ರ ನಿರ್ಮಾಣದ ವೇಳೆ ವಿವಿಧ ಹಂತಗಳಲ್ಲಿ ಚಿತ್ರದ ಪ್ರತ್ಯೇಕ ಭಾಗಗಳನ್ನು ಸುಲಭವಾಗಿ ವಿಮರ್ಶೆ ಮಾಡಲು ಕಲಾವಿದರಿಗೆ ಸಹಕರಿಸುತ್ತದೆ.
1996ರಲ್ಲಿ ಕಾರ್ಯ ಆರಂಭಿಸಿದ ತಂಡದಲ್ಲಿ ಕಳೆದ 8 ವರ್ಷದಿಂದ ಕೊಟ್ಟಲ್ಯಾಂಗೊ ಮಹತ್ವದ ಕೊಡುಗೆ ನೀಡಿದ್ದು, ವಾಣಿಜ್ಯ ತಂತ್ರಾಂಶಗಳ ಹೊರತಾಗಿಯೂ ಈ ಉಪಕರಣದ ಕುರಿತು ಕಲಾವಿದರು ಶ್ಲಾಘಿಸಿದ್ದಾರೆ ಎಂದು ಕೊಟ್ಟಲ್ಯಾಂಗೊ ಹೇಳಿದ್ದಾರೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಜನಿಸಿದ ಕೊಟ್ಟಲ್ಯಾಂಗೊ, ಕೊಯಂಬತ್ತೂರಿನಲ್ಲಿ ಬೆಳೆದರು. 1994ರಲ್ಲಿ ಸ್ನಾತಕೋತ್ತರ ಪದವಿ ಮುಂದುವರಿಸಲು ಅಮೇರಿಕಾಗೆ ತೆರಳಿದ್ದರು.
ಮೋಷನ್ ಪಿಕ್ಚರ್ ಆರ್ಟ್ಸ್ ಮತ್ತು ಸೈನ್ಸ್ ಅಕಾಡೆಮಿ 10 ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನೆಗಳ ಪ್ರಶಸ್ತಿಯನ್ನು ಫೆ.13ರಂದು ನಡೆಯಲಿರುವ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಶಸ್ತಿ ಸಮಾರಂಭದಲ್ಲಿ ನೀಡಲಿದೆ.
ಆಸ್ಕರ್ ಪ್ರಶಸ್ತಿ ಸಮಾರಂಭವು ಫೆ.28ರಂದು ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.